ನನ್ನನ್ನು ಪ್ರಶ್ನಿಸಲು ಅನಂತಮೂರ್ತಿ ಯಾರು: ರಾಜ್ಯಪಾಲರ ಕಿಡಿ

ಗುರುವಾರ, 30 ಜನವರಿ 2014 (19:14 IST)
PR
PR
ವಿಶ್ವವಿದ್ಯಾನಿಲಯದ ಕುಲಪತಿ ನೇಮಕ ನನ್ನ ಪರಮಾಧಿಕಾರ ಎಂದು ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಹೇಳುವ ಮೂಲಕ ಅನಂತಮೂರ್ತಿ ತಮಗೆ ಹೇಳಬೇಕಾದ ಅಗತ್ಯವಿಲ್ಲ ಎಂದು ಪರೋಕ್ಷವಾಗಿ ತಿಳಿಸಿದ್ದಾರೆ. ಗುರುವಾರ ಚಿಂತನಾ ಸಭೆಯಲ್ಲಿ ಮಾತನಾಡುತ್ತಿದ್ದ ರಾಜ್ಯಪಾಲರು, ದಾವಣಗೆರೆ ವಿವಿಗೆ ಕುಲಪತಿ ನೇಮಕ ವಿಚಾರದಲ್ಲಿ ನನ್ನ ಅಧಿಕಾರವನ್ನು ಪ್ರಶ್ನಿಸುವ ಹಕ್ಕು ಅನಂತಮೂರ್ತಿಗಿಲ್ಲ. ಕುಲಪತಿ ನೇಮಕ ನನ್ನ ವಿವೇಚನೆಗೆ ಬಿಟ್ಟಿದ್ದು ಎಂದು ಭಾರದ್ವಾಜ್ ಹೇಳಿದರು.ಕುಲಪತಿ ನೇಮಕಾತಿ ವಿಚಾರದಲ್ಲಿ ಬೇರೆಯವರು ಮೂಗು ತೂರಿಸುವ ಅಗತ್ಯವಿಲ್ಲ. ಶೋಧನಾ ಸಮಿತಿಯನ್ನು ನೇಮಿಸಿದ್ದೇ ನಾನು. ನನ್ನನ್ನು ಪ್ರಶ್ನಿಸಲು ಅನಂತಮೂರ್ತಿ ಯಾರು ಎಂದು ರಾಜ್ಯಪಾಲರು ಖಾರವಾಗಿ ಕೇಳಿದ್ದಾರೆ. ಕುಲಪತಿ ನೇಮಕ ವಿಚಾರದಲ್ಲಿ ಅವ್ಯವಹಾರ ನಡೆದಿದೆ ಎಂದು ಅನಂತಮೂರ್ತಿ ಆರೋಪಿಸಿದ್ದರು.

ಕುಲಪತಿಗಳ ನೇಮಕ ದಂಧೆಯಲ್ಲಿ ಮುಖ್ಯಮಂತ್ರಿಗಳ ಜತೆ ಚರ್ಚೆ ನಡೆಸದೇ ರಾಜ್ಯಪಾಲರು ಪದೇ ಪದೇ ಮಿತಿ ದಾಟುತ್ತಿದ್ದಾರೆ ಎಂದು ಶೋಧನಾ ಸಮಿತಿ ಅಧ್ಯಕ್ಷ ಅನಂತಮೂರ್ತಿ ನೇರವಾಗಿ ಕಿಡಿಕಾರಿದ್ದರು.ಕುಲಪತಿ ಬಿ.ಬಿ. ಕಲಿವಾಳರನ್ನು ಬದಲಿಸಬೇಕು ಎಂದು ಒತ್ತಾಯಿಸಿದ್ದರು. .ನೇಮಕ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯೇ ಇಲ್ಲ. ಬುಡಕಟ್ಟು ಸಮುದಾಯ ಪ್ರತಿನಿಧಿಸೋ ಗೋಮತಿದೇವಿಯವರನ್ನು ಕುಲಪತಿ ಹುದ್ದೆಗೆ ನೇಮಿಸದೇ ಅನ್ಯಾಯ ಮಾಡಲಾಗಿದೆ ಎಂದು ಅನಂತಮೂರ್ತಿ ದೂರಿದ್ದರು.

ವೆಬ್ದುನಿಯಾವನ್ನು ಓದಿ