ನರಕಚತುರ್ದಶಿ ದಿನ ಕಳವು ಮಾಡುವ ಮೂಢನಂಬಿಕೆ

ಶುಕ್ರವಾರ, 9 ನವೆಂಬರ್ 2007 (10:58 IST)
ಮಲೆನಾಡಿನ ಪ್ರದೇಶದಲ್ಲಿ ಒಂದು ಮೂಢನಂಬಿಕೆ ಚಾಲ್ತಿಯಲ್ಲಿದೆ. ಭೂರಿ ಹಬ್ಬ ಎಂದು ಕರೆಯಲಾಗುವ ನರಕಚತುರ್ದಶಿ ದಿನ ಕಳವು ಮಾಡಲೇ ಬೇಕು, ಜತೆಗೆ ಬೈಸಿಕೊಳ್ಳಲೂ ಬೇಕು ಅಷ್ಟೇ ಅಲ್ಲ ಕಳವು ಮಾಡಿದ ವಸ್ತುವನ್ನು ವಾಪಸ್ ಕೊಡಲೂ ಬೇಕು. ಈ ಮೂಢನಂಬಿಕೆ ಹಿಂದಿನಿಂದಲೂ ನಡೆದುಕೊಂಡು ಬರುತ್ತಿದೆ.

ಕಳವು ಕಾರ್ಯವನ್ನು ಬಹು ಚಾಣಾಕ್ಷದಿಂದ ನಿರ್ವಹಿಸಬೇಕು. ಕಳವು ಮಾಡುವಾಗಿ ಸಿಕ್ಕಿಹಾಕಿಕೊಂಡರೆ ಕೆಟ್ಟದ್ದು ಸಂಭವಿಸುತ್ತದೆ. ಅದು ಭವಿಷ್ಯಕ್ಕೆ ಮಾರಕವಾಗುತ್ತದೆ ಎಂದು ವಿಶ್ಲೇಷಿಸಲಾಗುತ್ತದೆ.

ಕಳವು ಮಾಡಿದ ಮಾಲನ್ನು ತಮ್ಮಲ್ಲೇ ಇಟ್ಟುಕೊಳ್ಳದೇ ಮಾಲೀಕರಿಗೆ ವಾಪಸ್ ಕೊಡುವಾಗ ಅವರು ಬೈದರೆ ಮುಂದೆ ಒಳ್ಳೆಯದಾಗುತ್ತದೆ ಎಂಬುದು ಇಲ್ಲಿನ ಜನರ ನಂಬಿಕೆ.

ಜನ ಕಳವು ಮಾಡುವ ವಸ್ತುಗಳ ಪಟ್ಟಿ ಇಂತಿದೆ.

ಖಾರ ಅರೆಯುವ ಗುಮಡು, ಬಚ್ಚಲು ಮನೆಯಲ್ಲಿ ನೀರು ಕಾಯಿಸುವ ಹಂಡೆ, ಬಾವಿ ಹಗ್ಗ, ಪಂಪ್ಸೆಟ್, ಸೈಕಲ್, ಗೇಟ್, ಬಲಿಪಾಡ್ಯಮಿ ದಿನ ಪೂಜೆಗೆ ಬಳಸುವ ನೇಗಿಲು, ನೊಗ ಮುಂತಾದವುಗಳನ್ನು ಕಳವು ಮಾಡುತ್ತಾರೆ.

ಹಾಗಾಗಿ ಇಲ್ಲಿನ ಜನ ಭೂರೆ ಹಬ್ಬದಂದು ಭಾರಿ ಎಚ್ಚರಿಕೆ ವಹಿಸುತ್ತಾರೆ. ಮನೆಗೆ ಬಂದು ಹೋಗುವವರನ್ನು ಹದ್ದಿನ ಕಣ್ಣಿನಲ್ಲಿ ಕಾಯತ್ತಿರುತ್ತಾರೆ.

ಇಷ್ಟೆಲ್ಲಾ ನಡೆದರೂ ಜನ ಇದನ್ನು ಕಳವು ಎನ್ನುವುದಿಲ್ಲ. ಬದಲಿಗೆ ಭೂರೆ ಹಾಯುವುದು ಎನ್ನುತ್ತಾರೆ.

ವೆಬ್ದುನಿಯಾವನ್ನು ಓದಿ