ಬಿಜೆಪಿ ಹೈಕಮಾಂಡ್ ಸಕಾರಾತ್ಮಕ ಸ್ಪಂದನೆ : ಆದಷ್ಟು ಬೇಗ ಬಿಎಸ್‌ವೈ ಬಿಜೆಪಿಗೆ

ಗುರುವಾರ, 5 ಡಿಸೆಂಬರ್ 2013 (17:55 IST)
PR
PR
ಯಡಿಯೂರಪ್ಪ ಅವರಿಗೆ ಬಿಜೆಪಿಗೆ ಸೇರ್ಪಡೆಯಾಗುವಂತೆ ಆಹ್ವಾನ ನೀಡುವುದು ಬಹುತೇಕ ಖಚಿತಪಟ್ಟಿದೆ. ಈ ಕುರಿತು ಬಿಜೆಪಿ ಹೈಕಮಾಂಡ್‌ನಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ ಇಂದು ಕರ್ನಾಟಕ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಕಾಂಗ್ರೆಸ್ ವಿರೋಧಿ ಮತಗಳು ವಿಭಜನೆಯಾಗುವುದನ್ನು ತಪ್ಪಿಸುವುದಕ್ಕೆ ಯಡಿಯೂರಪ್ಪ ಅವರ ವಾಪಸಾತಿ ಬಗ್ಗೆ ರಾಷ್ಟ್ರೀಯ ನಾಯಕರಿಗೆ ಮನದಟ್ಟು ಮಾಡಿದ್ದರಿಂದ ಉಳಿದೆಲ್ಲಾ ನಾಯಕರ ಜತೆ ಚರ್ಚೆ ನಡೆಸಿ ತಿಳಿಸುವುದಾಗಿ ರಾಜನಾಥ್ ಸಿಂಗ್ ಹೇಳಿರುವುದಾಗಿ ಜೋಷಿ ಹೇಳಿದರು.

ಯಡಿಯೂರಪ್ಪ ವಾಪಸಾತಿ ಬಗ್ಗೆ ಕರ್ನಾಟಕ ಘಟಕ ಅಧಿಕೃತ ವಿನಂತಿಯನ್ನು ರಾಜನಾಥ್ ಸಿಂಗ್ ಅವರಿಗೆ ಮಾಡಿದೆ. ಐದು ರಾಜ್ಯಗಳ ಚುನಾವಣೆ ನಂತರ ಇದರ ಬಗ್ಗೆ ಗಮನಹರಿಸುತ್ತೇವೆ ಎಂದು ರಾಷ್ಟ್ರನಾಯಕರು ಹೇಳಿದ್ದರಿಂದ ನಾವು ಚುನಾವಣೆ ಫಲಿತಾಂಶದ ನಂತರ ಭೇಟಿ ಮಾಡಿದ್ದೇವೆ ಎಂದು ಜೋಷಿ ಹೇಳಿದರು.
ಹೆಚ್ಚಿನ ಮಾಹಿತಿಗೆ ಮುಂದಿನ ಪುಟ ನೋಡಿ

PR
PR
ಬಿಜೆಪಿ ನೈತಿಕ ಆಧಾರದ ಮೇಲೆ ಮುಖ್ಯಮಂತ್ರಿ ಸ್ಥಾನದಿಂದ ತೆಗೆದುಹಾಕಿತ್ತು. ಯಾವುದೇ ಕೋರ್ಟ್ ಅವರನ್ನು ಅಪರಾಧಿ ಎಂದು ತೀರ್ಮಾನ ಮಾಡಿಲ್ಲ. ಅವರು ಪಕ್ಷದ ಮುಖಂಡರಾಗಿ ಹಿಂದೆ ಕೆಲಸ ಮಾಡಿದ್ದಾರೆ. ಮುಂದೆಯೂ ಮಾಡಬೇಕೆಂದು ನಾವು ಆಶಿಸುತ್ತೇವೆ ಎಂದು ಪ್ರಹ್ಲಾದ್ ಜೋಷಿ ಹೇಳಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಈಶ್ವರಪ್ಪ ಅವರು, ಯಡಿಯೂರಪ್ಪ ಬರೋದ್ರಿಂದ ಲೋಕಸಭೆಯಲ್ಲಿ ಅತೀ ಹೆಚ್ಚು ಸ್ಥಾನ ಗೆಲ್ಲಲು ಸಾಧ್ಯವಾಗುತ್ತದೆ. ಬಿಜೆಪಿಯ ಮತವಿಭಜನೆಯಾಗುವುದಿಲ್ಲ ಎಂದು ಸ್ಪಷ್ಟವಾಗಿ ರಾಷ್ಟ್ರೀಯ ಅಧ್ಯಕ್ಷರ ಗಮನಕ್ಕೆ ತಂದಾಗ ಈ ಕುರಿತು ಉಳಿದೆಲ್ಲ ನಾಯಕರ ಗಮನಕ್ಕೆ ತಂದು ಪರಿಶೀಲನೆ ಮಾಡುವುದಾಗಿ ರಾಜನಾಥ್ ಸಿಂಗ್ ಹೇಳಿದ್ದಾರೆ.

ಯಡಿಯೂರಪ್ಪ ಅವರನ್ನು ಆದಷ್ಟು ಬೇಗ ನಮ್ಮ ಪಕ್ಷಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಎಲ್ಲ ಪ್ರಯತ್ನ ಮಾಡ್ತಿದ್ದೇವೆ ಎಂದು ಈಶ್ವರಪ್ಪ ಹೇಳಿದರು. ಯಡಿಯೂರಪ್ಪ ಕುರಿತು ನಾನು ಮಾತಾಡಿದ್ದೇನೆ. ಅವರು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಈಶ್ವರಪ್ಪ ಹೇಳಿದರು.

ವೆಬ್ದುನಿಯಾವನ್ನು ಓದಿ