ಮುತಾಲಿಕ್‌ ರಾಜಕೀಯಕ್ಕೆ ಎಂಟ್ರಿ : ಬಿಜೆಪಿ ಟಿಕೇಟ್‌ ಕೊಡದಿದ್ದರೆ ಪಕ್ಷೇತರನಾಗಿ ಕಣಕ್ಕೆ.

ಮಂಗಳವಾರ, 1 ಅಕ್ಟೋಬರ್ 2013 (12:20 IST)
PR
PR
ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಚುನಾವಣೆಗೆ ಸ್ಪರ್ಧಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಬಿಜೆಪಿಯಿಂದ ಟಿಕೇಟ್‌ ಸಿಗದಿದ್ದರೇ ಬಿಜೆಪಿ ಪಕ್ಷದ ವಿರುದ್ಧವೇ ಪಕ್ಷೇತರನಾಗಿ ಸ್ಪರ್ಧಿಸುತ್ತೇನೆ ಎಂದು ಹೇಳುವುದರ ಮೂಲಕ ಬಿಜೆಪಿ ಮುಖಂಡರಿಗೆ ಟಾಂಗ್‌ ಕೊಟ್ಟಿದ್ದಾರೆ.

ಮೊದಲನೆಯದಾಗಿ ಬಿಜೆಪಿ ಪಕ್ಷದ ವತಿಯಿಂದ ಟಿಕೆಟ್‌ ಅಪೇಕ್ಷಿಸುತ್ತಿದ್ದಾರೆ ಮುತಾಲಿಕ್.. ತಮ್ಮ ಶ್ರೀರಾಮಸೇನೆಯ ಪ್ರಭಾವವನ್ನು ಬಳಸಿಕೊಂಡು ಚುನಾವಣೆಯಲ್ಲಿ ಗೆಲ್ಲುವ ಆಲೋಚನೆಯಲ್ಲಿರುವ ಪ್ರಮೋದ್‌ ಮುತಾಲಿಕ್‌ ಅಂತಿಮವಾಗಿ ಪಕ್ಷೇತರನಾಗಿಯಾದರೂ ಸ್ಪರ್ದಿಸಿವೆ ಎಂಬ ದಿಟ್ಟ ನಿರ್ಧಾರವನ್ನು ಮಾಧ್ಯಮದ ಎದುರು ಬಿಚ್ಚಿಟ್ಟಿದ್ದಾರೆ.

ಇನ್ನಷ್ಟು ಸುದ್ದಿ ಮುಂದಿನ ಪುಟದಲ್ಲಿ...

PR
PR
ಇದೇ ತಿಂಗಳ 23 ರಿಂದ 27 ರ ವರೆಗೆ ಚಿಕ್ಕಮಗಳೂರಿನ ದತ್ತ ಪೀಠದಲ್ಲಿ ದತ್ತ ಮಾಲಾ ಅಭಿಯಾನವಿದೆ. ಈ ಹಿನ್ನೆಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶ್ರೀಮರಾಮ ಸೇನೆಯ ಮುಖ್ಯಸ್ಥ ನಾನು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ. ಇದಕ್ಕೆ ಬಿಜೆಪಿ ಟಿಕೆಟ್‌ ನೀಡಬೇಕು ಎಂದು ಇಚ್ಚಿಸುತ್ತಿದ್ದೇನೆ. ಒಂದುವೇಳೆ ಬಿಜೆಪಿ ಪಕ್ಷದಿಂದ ನನಗೆ ಟಿಕೇಟ್‌ ಸಿಗದಿದ್ದರೇ, ನಾನು ಪಕ್ಷೇತರನಾಗಿಯಾದರೂ ಕಣಕ್ಕೆ ಇಳಿಯುತ್ತೇನೆ. ಒಟ್ಟಿನಲ್ಲಿ ಮುಂದಿನ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದು ಖಡಾ ಖಂಡಿತ ಎಂದು ಹೇಳುವುದರ ಮೂಲಕ ಬಿಜೆಪಿಗತೆ ಸಡ್ಡು ಹೊಡೆದಿದ್ದಾರೆ.

ಇನ್ನಷ್ಟು ಸುದ್ದಿ ಮುಂದಿನ ಪುಟದಲ್ಲಿ..

PR
PR

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಶತಾಯಗತಾಯ ಚುನಾವಣೆಗೆ ಸ್ಪರ್ಧಿಸಿಯೇ ತೀರುತ್ತೇನೆ ಎಂದು ಹೇಳುವುದರ ಮೂಲಕ ಬಿಜೆಪಿ ಪಕ್ಷಕ್ಕೆ ಭಯ ಹುಟ್ಟಿಸಿದ್ದಾರೆ. ಅಷ್ಟೆ ಅಲ್ಲ, ಬಿಜೆಪಿ ಟಿಕೇಟ್‌ ನೀಡದಿದ್ದರೆ, ಚಿಕ್ಕಮಗಳೂರಿನಲ್ಲಿ ಬಿಜೆಪಿಗೆ ಕಂಟಕ ಕಾದಿದೆ ಎಂಬ ಮುನ್ಸೂಚನೆಯನ್ನು ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ