ಮೋದಿ ಅಪಾಯಕಾರಿ ಜಾತಿಗೆ ಸೇರಿದವರು : ಸಿದ್ರಾಮಯ್ಯ.

ಗುರುವಾರ, 31 ಅಕ್ಟೋಬರ್ 2013 (13:34 IST)
PR
PR
ಮೋದಿ ಅಪಾಯಕಾರಿ ಜಾತಿಗೆ ಸೇರಿದ ವ್ಯಕ್ತಿ. ಅವರು ನಿರಂಕುಶವಾದಿ ಪಕ್ಷದಿಂದ ಬಂದವರು. ಆರ್‌ಎಸ್‌ಎಸ್‌ ಕೂಡ ನಿರಂಕುಶ ಧೋರಣೆಯನ್ನು ಅನುಸರಿಸುತ್ತಿದೆ. ಆದ್ರೆ ನಾನು ಪ್ರಜಾಪ್ರಭುತ್ವವನ್ನು ಮೈಗೂಡಿಸಿಕೊಂಡಿರುವ ವ್ಯಕ್ತಿ. ಹೀಗಾಗಿ ಅವರಿಗೂ ನನಗೂ ಅಜಗಜಾಂತರ ವ್ಯತ್ಯಾಸ ಇದೆ ಎಂದು ಸಿಎಂ ಸಿದ್ರಾಮಯ್ಯನವರು ಇಂದು ಹೇಳಿದ್ದಾರೆ.

ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರು ಇದೇ ನವೆಂಬರ್‌ 16 ರಂದು ಬೆಂಗಳೂರಿಗೆ ಆಗಮಿಸಲಿದ್ದಾರೆ. ಅವರಿಗೆ ಭದ್ರತೆ ಒದಗಿಸಬೇಕಾಗಿರುವುದು ನಮ್ಮ ಕರ್ತವ್ಯ. ಯಾವುದೇ ರಾಜಕಾರಣಿಗಳು ಅಥವ ಗಣ್ಯ ವ್ಯಕ್ತಿಗಳು ಬಂದರೂ ಅವರಿಗೆ ಭದ್ರತೆ ಒದಗಿಸುವುದು ನಮ್ಮ ಕರ್ತವ್ಯ. ಹೀಗಾಗಿ ಅದರಂತೆಯೇ ಮೋದಿಯವರಿಗೂ ಭದ್ರತೆಯನ್ನು ಒದಗಿಸುತ್ತೇವೆ ಎಂದು ಸಿಎಂ ಸಿದ್ರಾಮಯ್ಯನವರು ಹೇಳಿದ್ರು.

ಇದೇ ವೇಳೆ ಮಾತನಾಡಿದ ಸಿಎಂ ಸಿದ್ರಾಮಯ್ಯನವರು ನನಗೂ ಮೋದಿಗೂ ವ್ಯತ್ಯಾಸವಿದೆ. ಮೋದಿ ಅಪಾಯಕಾರಿ ಜಾತಿಗೆ ಸೇರಿದವರು. ಅವರು ನಿರಂಕುಶ ಜಾತಿಯ ನಾಯಕ. ನಾನು ಪ್ರಜಾಪ್ರಭುತ್ವ ಚಿಂತಕ ಎಂದು ಹೇಳುವುದರ ಮೂಲಕ ಮೋದಿಗೆ ಟಾಂಗ್‌ ಕೊಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ