ಸುಮ್ಮನೆ ಕುಳಿತುಕೊಳ್ಳಲು ದಕ್ಷಿಣ ಕನ್ನಡ ಜಿಲ್ಲೆಯವರು ಷಂಡರಲ್ಲ: ಶೋಭಾ ಕರಂದ್ಲಾಜೆ

ಸೋಮವಾರ, 10 ಜುಲೈ 2017 (13:07 IST)
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಘ ಪರಿವಾರದವರ ಹತ್ಯೆ ನಡೆಯುತ್ತಿದೆ. ಇಷ್ಟು ದಿನಗಳಾದರೂ ಕ್ರಮ ಕೈಗೊಂಡಿಲ್ಲ. ಸುಮ್ಮನೆ ಕುಳಿತುಕೊಳ್ಳಲು ದಕ್ಷಿಣ ಕನ್ನಡ ಜಿಲ್ಲೆಯವರು ಷಂಡರಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಕಿಡಿ ಕಾರಿದ್ದಾರೆ.

42 ದಿನ ನಾವು ಸುಮ್ಮನೆ ಕುಳಿತಿದ್ದೆವು. ಾದರೂ ನಮಗೆ ನ್ಯಾಯ ಸಿಕ್ಕಿಲ್ಲ. ಕಾಂಗ್ರೆಸ್ ಸರ್ಕಾರ ಏನು ಮಾಡುತ್ತೆ. ಪಿಎಫೈ ಏನು ಮಾಡುತ್ತೆ ಎಂದು ಕೇಳಿಕೊಂಡು ಕುಳಿತುಕೊಳ್ಳಲು ನಾವು ಷಂಡರಲ್ಲ. ನಾವು ನಮ್ಮ ನ್ಯಾಯಕ್ಕಾಗಿ ಹೋರಾಟಕ್ಕೆ ಇಳಿದಿದ್ದೆವು. ಯಾವುದೇ ಪ್ರಚೋದಕ ಹೇಳಿಕೆಗಳನ್ನ ನೀಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಗಲಭೆ ಮಾಡಿದರೆ ಹಿಂದೂಗಳಾಗಿ ಬೇರೆ ಯಾವುದೇ ಧರ್ಮದವರಾಗಲಿ ಕ್ರಮ ಜರುಗಿಸುವುದಾಗಿ ಹೇಳುತ್ತಾರೆ. ಮುಸ್ಲಿಂ ಎಂಬ ಪದವನ್ನ ಸಿಎಂ ಸಿದ್ದರಾಮಯ್ಯ ಬಳಸದೇ ಇರುವ ಬಗ್ಗೆ ಶೋಭಾ ಕಂದ್ಲಾಜೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸದ್ಯ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು, ನಿಷೇಧಾಜ್ಞೆ ಮುಂದುವರೆಸಲಾಗಿದೆ. ಇತ್ತ ಸಿಎಂ ಸಿದ್ದರಾಮಯ್ಯ ಸಹ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ