ಅಂಗಡಿಗೆ ಬಂದ ಮುಗ್ಧ ಬಾಲಕಿಯನ್ನು ಪುಸಲಾಯಿಸಿ ಅಂಗಡಿ ವ್ಯಾಪಾರಿ ಕಳೆದ ಆರು ತಿಂಗಳಿಂದ ನಿರಂತರ ಅತ್ಯಾಚಾರ ಮಾಡಿದ್ದರಿಂದ ಈಗ ಬಾಲಕಿ ಗರ್ಭಿಣಿಯಾದ ಘಟನೆ ನಡೆದಿದೆ. ಮೈಸೂರಿನ ಗೌಸಿಯಾನಗರದಲ್ಲಿ ಈ ಕುರಿತಂತೆ ಆರೋಪಿ ಮೆಹಬೂಬ್ ಪಾಷಾನನ್ನು ಬಂಧಿಸಲಾಗಿದೆ.
53 ವರ್ಷ ವಯಸ್ಸಿನ ಈ ಕಾಮುಕ 14 ವರ್ಷದ ಬಾಲಕಿ ಮೇಲೆ ಕಳೆದ 6 ತಿಂಗಳಿಂದ ನಿರಂತರ ಅತ್ಯಾಚಾರ ನಡೆಸುತ್ತಿದ್ದರಿಂದ ಬಾಲಕಿ 4 ತಿಂಗಳ ಗರ್ಭಿಣಿಯಾಗಿದ್ದಾಳೆ. ಪೊಲೀಸರು ಎಲ್ಲ ಸಾಕ್ಷ್ಯಗಳನ್ನು ಕಲೆಹಾಕಿ ನ್ಯಾಯಾಂಗ ಬಂಧನಕ್ಕೆ ಆರೋಪಿಯನ್ನು ಒಪ್ಪಿಸಿದ್ದಾರೆ. ಬಾಲಕಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ.