ಅತ್ಯಾಚಾರ ಆರೋಪಿ ಶಾಸಕ ಜೀವರಾಜ್‌ಗೆ ಜಾಮೀನು

ಸೋಮವಾರ, 25 ನವೆಂಬರ್ 2013 (19:13 IST)
PR
PR
ಯುವತಿಯೋರ್ವಳ ಮೇಲೆ ಅತ್ಯಾಚಾರ ಮಾಡಿದ ಆರೋಪವನ್ನು ಎದುರಿಸುತ್ತಿರುವ ಮಾಜಿ ಸಚಿವ ಕಂ ಶೃಂಗೇರಿ ಶಾಸಕ ಡಿ.ಎನ್.ಜೀವರಾಜ್ ಅವರಿಗೆ ಚಿಕ್ಕಮಗಳೂರು ನ್ಯಾಯಾಲಯ ಇಂದು ಷರತ್ತುಬದ್ದ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಜೀವರಾಜ್ ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಚಿಕ್ಕಮಗಳೂರು ಪ್ರಧಾನ ಸತ್ರ ನ್ಯಾಯಾಲಯವು ಷರತ್ತು ಬದ್ದ ಜಾಮೀನು ನೀಡಿದ್ದು, ಸಾಕ್ಷಿದಾರರಿಗೆ ಬೆದರಿಕೆ ಹಾಕದಂತೆ ಶರತ್ತು ವಿಧಿಸಿದ್ದಾರೆ. ಅಷ್ಟೆ ಅಲ್ಲ, 10 ದಿನದ ಒಳಗಾಗಿ ತನಿಖಾಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗುವಂತೆ ಜೀವರಾಜ್‌ಗೆ ನ್ಯಾಯಾಲಯ ಸೂಚನೆ ನೀಡಿದೆ.

ನ್ಯಾಯಾಲಯಕ್ಕೆ 2 ಲಕ್ಷ ರುಪಾಯಿಗಳ ಬಾಂಡ್ ನೀಡಿರುವ ಜೀವರಾಜ್‌, ಯಾವುದೆ ಕಾರಣಕ್ಕೂ ದೇಶಬಿಟ್ಟು ತೆರಳದಂತೆ ನ್ಯಾಯಾಲಯ ಶರತ್ತು ವಿಧಿಸಿದೆ.

ಏನಿದು ಅತ್ಯಾಚಾರ ಆರೋಪ? ಪಂಚೆ ಹರುಕರು ಯುವತಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಮಾಡಿದ್ರಾ? ಇನ್ನಷ್ಟು ಮಾಹಿತಿ ಮುಂದಿನ ಪುಟದಲ್ಲಿ..

PR
PR
ಏನಿದು ಅತ್ಯಾಚಾರ ಆರೋಪ?

ನವೆಂಬರ್‌ 08 ರಂದು, ಮೂರು ವರ್ಷಗಳ ಹಿಂದೆ ಯುವತಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿರುವುದಾಗಿ ಬಿಜೆಪಿ ಶಾಸಕ ಡಿ.ಎನ್.ಜೀವರಾಜ್ ಸೇರಿದಂತೆ ಮೂರು ಮಂದಿ ವಿರುದ್ಧ ಎನ್‌.ಆರ್‌.ಪುರ ತಾಲ್ಲೂಕಿನ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

"ಶೃಂಗೇರಿ ಶಾಸಕ ಜೀವರಾಜ್‌, ಎನ್‌.ಆರ್‌.ಪುರ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಜೆ.ಜಿ.ನಾಗರಾಜ್‌, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಆರ್‌ ಆಶೀಷ್ ಕುಮಾರ್‌ ನನ್ನನ್ನು ಅಪಹರಣ ಮಾಡಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ. ಅಷ್ಟೆ ಅಲ್ಲ, ವಿಷಯ ಬಹಿರಂಗ ಪಡಿಸದಂತೆ ನನ್ನ ಮೇಲೆ ಜೀವ ಬೆದರಿಕೆ ಹಾಕಿದ್ದಾರೆ’ ಎಂದು ಅತ್ಯಾಚಾರಕ್ಕೆ ಒಳಗಾದ ಯುವತಿ ನವೆಂಬರ್‌ 08 ರಂದು ಎನ್‌.ಆರ್‌.ಪುರ ಪೋಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಳು.

ಮೂಲತಃ ಎನ್‌ ಆರ್‌ ಪುರ ತಾಲ್ಲೂಕಿನ ಕೆಸಕಿ ಮಡಬೂರು ಮೂಲದ ಯುವತಿಯನ್ನು ಮೇ 2010ರಲ್ಲಿ ಅಪಹರಿಸಲಾಯಿತು. "ವಾಹನದಲ್ಲಿ ಬಂದ ಶಾಸಕ ಜೀವರಾಜ್‌ ಮತ್ತಿಬ್ಬರು ಆಪ್ತರು ನನ್ನನ್ನು ಅಪಹರಿಸಿ ಶಾಸಕರ ತೋಟದ ಮನೆಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದರು. ಅಲ್ಲದೆ ಮೊಬೈಲ್‌ನಲ್ಲಿ ಫೋಟೊ ತೆಗೆದುಕೊಂಡು ಯಾರಿಗೂ ವಿಷಯ ಬಹಿರಂಗಪಡಿಸದಂತೆ ಬೆದರಿಕೆ ಹಾಕಿದರು. ಜೀವ ಭಯದಿಂದ ಇಷ್ಟು ದಿನ ದೂರು ನೀಡಿರಲಿಲ್ಲ’ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಳು.

ತನಿಖೆ ಕೈಗೊಂಡ ಪೋಲೀಸರು ಶಾಸಕ ಜೀವರಾಜ್ ಮತ್ತು ಅವರ ಅಪ್ತರನ್ನು ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದರು. ಆದ್ರೆ ನ್ಯಾಯಾಲಯ ಇಂದು ಜೀವರಾಜ್‌ಗೆ ಶರತ್ತು ಬದ್ಧ ಜಾಮೀನು ನೀಡಿದೆ.

ವೆಬ್ದುನಿಯಾವನ್ನು ಓದಿ