ಅದಿರು ಉತ್ಪಾದನೆ ಕುಸಿತ: ಸರ್ಕಾರದ ವಿರುದ್ಧ ಸುಪ್ರೀಂ ಗರಂ

ಸೋಮವಾರ, 27 ಜನವರಿ 2014 (16:19 IST)
PR
PR
ರಾಜ್ಯದಲ್ಲಿ ಹೆಚ್ಚಿನ ಅದಿರು ಉತ್ಪಾದನೆಗೆ ಅವಕಾಶ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ನಡೆಸಿತು. ಹೆಚ್ಚುವರಿ ಅದಿರು ಉತ್ಪಾದನೆಗೆ ಸುಪ್ರೀಂಕೋರ್ಟ್ ನಕಾರ ಸೂಚಿಸಿದೆ. ರಾಜ್ಯದಲ್ಲಿ ಅದಿರು ಉತ್ಪಾದನೆ ಕುಸಿತವಾಗಿದ್ದು, ರಾಜ್ಯಸರ್ಕಾರದ ವಿರುದ್ದ ಸುಪ್ರೀಂ ಕೋರ್ಟ್ ಗರಂ ಆಗಿದೆ. ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂದು ಆಡಳಿತ ವೈಖರಿ ಬಗ್ಗೆ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತು.. ಈ ಬಗ್ಗೆ ಉತ್ತರಿಸಲು ಕೇಂದ್ರ ಪರಿಸರ ಇಲಾಖೆ, ಕರ್ನಾಟಕ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.

ಈ ಬಗ್ಗೆ ಸುಪ್ರೀಂಕೋರ್ಟ್ ಫೆಬ್ರವರಿ 24ರೊಳಗೆ ಉತ್ತರಿಸುವಂತೆ ಸೂಚನೆ ನೀಡಿದೆ. ವಾರ್ಷಿಕ 30 ಮಿಲಿಯನ್ ಮೆಟ್ರಿಕ್ ಟನ್ ಅದಿರು ಉತ್ಪಾದನೆಯಾಗುತ್ತಿಲ್ಲ . ಈ ಕುರಿತು ಅಡೆತಡೆಗಳನ್ನು ನಿವಾರಿಸುವಂತೆ ಸುಪ್ರೀಂಕೋರ್ಟ್‌ಗೆ ಅದಿರು ಕಂಪನಿಗಳು ಮನವಿ ಮಾಡಿಕೊಂಡಿವೆ.
.

ವೆಬ್ದುನಿಯಾವನ್ನು ಓದಿ