ಅಧಿಕಾರ ಹಸ್ತಾಂತರ;ಸಿಎಂ ಹೊಸರಾಗ

ಶುಕ್ರವಾರ, 20 ಜುಲೈ 2007 (16:53 IST)
ಅಧಿಕಾರ ಹಸ್ತಾಂತರಕ್ಕೆ ಇನ್ನಿರುವುದು ಎರಡೂವರೆ ತಿಂಗಳು ಬಾಕಿ. ಮುಖ್ಯಮತ್ರಿ ಕುಮಾರಸ್ವಾಮಿ ತನ್ನ ಅಧಿಕಾರವನ್ನು ಯಡಿಯೂರಪ್ಪ ಅವರ ಕೈಗೆ ಹಸ್ತಾಂರಿಸುವುದು ಈ ಹಿಂದೆ ನಡೆದಿರುವ ಒಪ್ಪಂದ.

ಆದರೆ ಆರಂಭದಿಂದಲೂ ಮುಖ್ಯ ಮಂತ್ರಿ ಸ್ಥಾನ ವನ್ನು ಹಸ್ತಾಂತರಿಸುತ್ತಾರೋ ಇಲ್ಲವೋ, ದೇವೇಗೌಡರು ತಮ್ಮ ಎಂದಿನ ಹೊಸ ರಾಜಕೀಯ ತಂತ್ರಗಳನ್ನು ಬಳಸಿ ಅಧಿಕಾರವನ್ನು ತಮ್ಮ ಪುತ್ರನ ಕೈಯಲ್ಲಿ ಉಳಿಸುವ ಬಗ್ಗೆ ಚಿಂತನೆ ನಡೆಸುವ ಬಗ್ಗೆ ಒಂದಿಲ್ಲೊಂದು ಸುದ್ದಿ ಹಬ್ಬುತ್ತಲೇ ಇತ್ತು . ಆದರೆ ಸಿಎಂ ಮಾತ್ರ ಅಧಿಖಾರ ಹಸ್ತಾಂತರ ನಿಶ್ಚಿತ ಎಂದು ಹೇಳುತ್ತಲೇ ಬಂದಿದ್ದರು.

ಆದರೆ ಇದೀಗ ಮುಖ್ಯಮಂತ್ರಿ ಹೊಸ ವ ರಸೆ ಪ್ರಾರಂಭಿಸಿದ್ದಾರೆ. ನಮಗೇನೋ ಅಧಿಕಾರ ಹಸ್ತಾಂತರ ನಡೆಸಲು ಆಸಕ್ತಿಯಿದೆ. ಆದರೆ ಬಿಜೆಪಿಯಲ್ಲಿಯೇ ಯ ಡಿಯೂರಪ್ಪ ಮುಖ್ಯಮಂತ್ರಿ ಆಗುವುದಕ್ಕೆ ಅಸಮಾಧಾನವಿದೆ. ಎಂದು ಹೇಳುವ ಮುಖೇನ ಅಧಿಕಾರದಲ್ಲಿ ಉಳಿಯುವ ಬ ಗ್ಗೆ ಹೊಸ ಆಶಾವಾದ ಇರಿಸಿದ್ದಾರೆ.

ನಮ್ಮಲ್ಲಿ ಒಮ್ಮತವಿದೆ. ಆದರೆ ಒಮ್ಮತವಿರದೇ ಇರುವುದು ಬಿಜೆಪಿಯಲ್ಲಿ. ನಾನಂತೂ ಅಧಿಕಾರದ ಬಗ್ಗೆ ಆಕಾಂಕ್ಷಿಯಲ್ಲ ಎಂಬುದು ಅವರ ಅನಿಸಿಕೆ. ಆದರೆ ಈ ಬಗ್ಗೆ ಜೆಡಿಎಸ್ ವರಿಷ್ಠ ದೇವೇಗೌಡರನ್ನು ಕೇಳಿದರೆ ನನಗೆ ಈ ಅಧಿಕಾರ ಹಸ್ತಾಂತರದ ಬಗ್ಗೆ ಗೊತ್ತೇ ಇಲ್ಲ ಎಂದು ಸುದ್ದಿಗಾರರೊಂದಿಗೆ ಹೇಳಿ ಜವಾಬ್ದಾರಿಯಿಂದ ನುಣುಚಿಕೊಂಡಿದ್ದಾರೆ.

ಒಟ್ಟಾರೆ ಅಧಿಕಾರ ಹಸ್ತಾಂತರ ಬಿಜೆಪಿ ಪಾಲಿಗೆ ಕನಸೇ ? ಕಾದು ನೋಡಬೇಕು.

ವೆಬ್ದುನಿಯಾವನ್ನು ಓದಿ