ಅನ್ನಭಾಗ್ಯ ಯಶಸ್ಸಿಗೆ ದುಡಿಯುವ ಕೂಲಿಕಾರ್ಮಿಕರಿಗೆ ಜುಜುಬಿ ಸಂಬಳ

ಶನಿವಾರ, 31 ಆಗಸ್ಟ್ 2013 (13:53 IST)
PR
PR
ಬೆಂಗಳೂರು:ಅನ್ನ ಭಾಗ್ಯ ಯೋಜನೆಯ ಅಕ್ಕಿ ನ್ಯಾಯಬೆಲೆ ಅಂಗಡಿಗಳಿಗೆ ಮುಟ್ಟುವುದನ್ನು ಖಾತರಿಪಡಿಸಲು ಮೈಮುರಿದು ದುಡಿಯುವ ನೂರಾರು ಮಂದಿ ಧಾನ್ಯದ ಮೂಟೆಗಳನ್ನು ಹೊರುವ ಶ್ರಮಿಕವರ್ಗ ಶುಕ್ರವಾರ ಪ್ರತಿಭಟನೆ ನಡೆಸಿದ್ದಾರೆ. ಕರ್ನಾಟಕ ಆಹಾರ ಮತ್ತು ನಾಗರಿಕ ಪೂರೈಕೆ ನಿಗಮದಲ್ಲಿ ಕೆಲಸ ಮಾಡುವ ಆಹಾರ ಧಾನ್ಯದ ಮೂಟೆ ಹೊರುವ ಕಾರ್ಮಿಕರು ಅನೇಕ ತಿಂಗಳಿಂದ ಕೂಲಿ ಮತ್ತು ಸಾಮಾಜಿಕ ಭದ್ರತೆ ಸೌಲಭ್ಯಗಳನ್ನು ಹೆಚ್ಚಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. ಸರ್ಕಾರದ ಈಡೇರಿಸದ ಭರವಸೆಗಳಿಂದ ಕುಪಿತಗೊಂಡ ಕಾರ್ಮಿಕರು ಬೆಂಗಳೂರು ನಗರ ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್‌ವರೆಗೆ ಮೆರವಣಿಗೆಯಲ್ಲಿ ತೆರಳಿದರು. ಕೂಲಿ ಕಾರ್ಮಿಕರಿಗೆ ಪ್ರಸಕ್ತ ಪ್ರತಿ ಕ್ವಿಂಟಾಲ್ ಲೋಡಿಂಗ್‌ ಮತ್ತು ಅನ್‌ಲೋಡಿಂಗ್‌ಗೆ 6 ರೂ. ನೀಡಲಾಗುತ್ತಿದೆ.

ಸುಮಾರು 13 ಗಂಟೆಗಳ ಕಾಲ ದುಡಿದ ಬಳಿಕವೂ ಅವರ ವರಮಾನ ಹೆಚ್ಚೆಂದರೆ ತಿಂಗಳಿಗೆ 4000 ರೂ.ನಿಂದ 6000 ರೂ.ನಮಗೆ ಯಾವುದೇ ಉದ್ಯೋಗ ಭದ್ರತೆ ಅಥವಾ ಸಾಮಾಜಿಕ ಭದ್ರತೆ ಇಲ್ಲ. ಅನ್ನಭಾಗ್ಯ ಯೋಜನೆ ಯಶಸ್ವಿಗೊಳಿಸಲು ನಾವು ಕಷ್ಟಪಡುತ್ತೇವೆ. ಆದರೆ ಸರ್ಕಾರ ಮಾತ್ರ ಕಣ್ಣು ಮುಚ್ಚಿಕೊಂಡು ಕುಳಿತಿದೆ ಎಂದು ಲೋಡಿಂಗ್ ಕಾರ್ಮಿಕರ ಒಕ್ಕೂಟದ ಅಧ್ಯಕ್ಷ ವರದರಾಜೇಂದ್ರ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ