ಅವನು ಕೆಮ್ಮಿದರೆ, ಮೂಳೆಗಳೆ ಪುಡಿ ಪುಡಿ : ಹೀಗೊಂದು ವಿಚಿತ್ರ ರೋಗ

ಭಾನುವಾರ, 17 ನವೆಂಬರ್ 2013 (11:26 IST)
PR
PR
ಜೋರಾಗಿ ಕೆಮ್ಮಿದರೆ ಸಾಕು ಆ ಬಾಲಕನ ಕೈ ಮತ್ತು ಕಾಲುಗಳ ಮೂಳೆಗಳು ಮುರಿದು ಹೋಗುತ್ತವೆ. ಇಂಥದ್ದೊಂದು ವಿಚಿತ್ರ ರೋಗಕ್ಕೆ ತುತ್ತಾಗಿರುವ ಬಾಲಕನಿಗೆ ಕೇವಲ 6 ವರ್ಷಗಳು ಮಾತ್ರ. ಈ ಬಾಲಕ ಜನಿಸಿದ ಇಪ್ಪತ್ತು ದಿನಗಳಲ್ಲಿಯೇ ಈ ಮೂಳೆ ಸಮಸ್ಯೆ ಕಾಣಿಸಿಕೊಂಡಿದೆ. ಅಂದಿನಿಂದ ಇಂದಿನವರೆಗೂ ಈ ಬಾಲಕನ ಪರಿಸ್ತಿತಿ ಹಾಗೆಯೇ ಇದ್ದು, ಈಗಾಗಲೇ ಈತನ ಮೈಯಲ್ಲಿನ ಹಲವು ಮೂಳೆಗಳು ಮುರಿದು ಹೋಗಿವೆ..!

ದಾವಣಗೆರೆ ಮೂಲದ ಆರು ವರ್ಷದ ಬಾಲಕ ಕಿಶನ್‌ ಅವರ ಮೂಳೆಗಳು ತುಂಬಾ ಮೃದುವಾಗಿದ್ದು, ಜೋರಾಗಿ ಕೆಮ್ಮಿದರೆ ಸಾಕು ಮೂಳೆಗಳು ಪುಡಿ ಪುಡಿಯಾಗುತ್ತವೆ. ಈ ಬಗ್ಗೆ ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಯಿತು. ಆದಾಗ್ಯೂ ಕೂಡ ಯಾವುದೇ ಬದಲಾವಣೆಗಳು ಆಗಲೇ ಇಲ್ಲ. ಅಷ್ಟೆ ಅಲ್ಲ, ಸ್ಥಳೀಯ ಆಸ್ಪತ್ರೆಗೆ ತೋರಿಸಿದ ಕೆಲವೇ ದಿನಗಳಲ್ಲಿ ಆತನ ತೊಡೆಯ ಭಾಗದ ಮೂಳೆ ಮುರಿದು ಹೋಯಿತು..!

ಹುಟ್ಟಿದಾಗಿನಿಂದ ಇಲ್ಲಿಯವರೆಗೆ ಸುಮಾರು ಆರು ವರ್ಷಗಳಲ್ಲಿ ಕಿಶನ್‌ ದೇಹದಲ್ಲಿನ 11 ಕಡೆ ಮೂಳೆಗಳು ಮುರಿದಿವೆ. ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳನ್ನು ಭರಿಸಲಾಗದ ಪೋಷಕರು ಕೈಕಟ್ಟಿ ಕುಳಿತಿದ್ದರು. ಆದ್ರೆ ಸ್ಪರ್ಶ್‌ ಆಸ್ಪತ್ರೆಯ ವೈದ್ಯರು ಈ ಬಾಲಕನಿಗೆ ಉಚಿತ ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ. ಹೀಗಾಗಿ ಇದೀಗ ಕಿಶನ್‌ ಸ್ವಲ್ಪ ನಿರಾಯಾಸವಾಗಿ ಓಡಾಡುತ್ತಿದ್ದಾನೆ.

ವೆಬ್ದುನಿಯಾವನ್ನು ಓದಿ