ಆಂತರಿಕ ಚುನಾವಣೆ: ರಾಜ್ಯ ಮುಖಂಡರ ಆಕ್ಷೇಪಕ್ಕೆ ಬೆಲೆಇಲ್ಲ

ಗುರುವಾರ, 20 ಫೆಬ್ರವರಿ 2014 (14:12 IST)
PR
PR
ಬೆಂಗಳೂರು: ಕಾಂಗ್ರೆಸ್‌ನಲ್ಲಿ ಎರಡು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಗೆ ಆಂತರಿಕ ಚುನಾವಣೆ ನಡೆಸುವ ಹೈಕಮಾಂಡ್ ನಿರ್ಧಾರಕ್ಕೆ ರಾಜ್ಯ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಬೆಂಗಳೂರು ಉತ್ತರ ಮತ್ತು ಮಂಗಳೂರು ಕ್ಷೇತ್ರದಲ್ಲಿ ಆಂತರಿಕ ಚುನಾವಣೆ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಹೈಕಮಾಂಡ್ ನಿರ್ಧರಿಸಿದೆ.ಆಂತರಿಕ ಚುನಾವಣೆಗೆ ಜನಾರ್ದನ ರೆಡ್ಡಿ ಅಸಮಾಧಾನ ಸೂಚಿಸಿದ್ದರಿಂದ ಆಂತರಿಕ ಚುನಾವಣೆ ಬೇಡ ಎಂದು ಜಿ.ಪರಮೇಶ್ವರ್ ಮತ್ತು ಸಿಎಂ ಸಿದ್ದರಾಮಯ್ಯ ಕೇಂದ್ರ ಚುನಾವಣೆ ಸಮಿತಿ ಸಭೆಯಲ್ಲಿ ತಮ್ಮ ಅಭಿಪ್ರಾಯ ತಿಳಿಸಿದ್ದರು. ಆದರೆ ರಾಜ್ಯ ನಾಯಕರ ವಾದಕ್ಕೆ ಮನ್ನಣೆ ನೀಡದ ಹೈಕಮಾಂಡ್ ಆಂತರಿಕ ಚುನಾವಣೆಗೆ ವೇಳಾಪಟ್ಟಿಗೆ ಸಿದ್ದತೆ ಮಾಡಿಕೊಳ್ಳುತ್ತಿದೆ.

ಮಂಗಳೂರು ಕ್ಷೇತ್ರದಲ್ಲಿ ಜನಾರ್ದನ ಪೂಜಾರಿ ಮತ್ತು ಕೇಂದ್ರ ಸಚಿವ ಮೊಯ್ಲಿ ಪುತ್ರ ಹರ್ಷ ಮೊಯ್ಲಿ ಟಿಕೆಟ್ ಆಕಾಂಕ್ಷಿಗಳಾಗಿದ್ದರೆ, ಬೆಂಗಳೂರು ಉತ್ತರದಲ್ಲಿ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಗಾಗಿ ರಮೇಶ್ ಜಿ.ಗೌಡ, ಬಿ.ಎಲ್.ಶಂಕರ್ ಮತ್ತು ರಾಜೀವ್ ಗೌಡ, ಎಚ್.ಎಂ.ರೇವಣ್ಣ ಮುಂತಾದವರು ಕಣಕ್ಕಿಳಿಯಲು ಬಯಸಿದ್ದಾರೆ. ಈ ಹಿನ್ನೆಲೆಯಲ್ಲಿ ಆಂತರಿಕ ಚುನಾವಣೆ ನಡೆಸಲು ಹೈಕಮಾಂಡ್ ಬಯಸಿದೆ.

ವೆಬ್ದುನಿಯಾವನ್ನು ಓದಿ