ಆಂಧ್ರ ಬಸ್‌ ದುರಂತ : ಡ್ರೈವರ್‌ ಮಧ್ಯಪಾನ ಮಾಡಿದ್ದನೆ?

ಬುಧವಾರ, 30 ಅಕ್ಟೋಬರ್ 2013 (17:58 IST)
PR
PR
ಪ್ರಾಥಮಿಕ ತನಿಖಾ ವರದಿಯ ಅನ್ವಯ ಆಂದ್ರಪ್ರದೇಶದ ಬಸ್‌ ದುರಂತದಲ್ಲಿ 45 ಜನರು ಸಾವಿಗೀಡಾಗಿದ್ದಾರೆ ಎಂಬುದು ಅಧಿಕೃತವಾಗಿ ತಿಳಿದುಬಂದಿದೆ. ವಾಹನವೊಂದನ್ನು ಓವರ್‌ ಟೇಕ್ ಮಾಡುವ ಸಂದರ್ಭದಲ್ಲಿ ರೋಡ್‌ ಡಿವೈಡರ್‌ಗೆ ಢಿಕ್ಕಿ ಹೊಡೆದ ಪರಿಣಾಮದಿಂದ ಟೈಯರ್‌ ಬ್ಲಾಸ್ಟ್ ಆಗಿದೆ. ಈ ಮೂಲಕ ಡೀಸೆಲ್ ಟ್ಯಾಂಕಿಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಇದುವರೆಗೆ ಹೇಳಲಾಗುತ್ತಿತ್ತು. ಆದ್ರೆ ಡ್ರೈವರ್‌ ಮಧ್ಯಪಾನ ಮಾಡಿ ವಾಹನ ಚಾಲನೆ ಮಾಡುತ್ತಿದ್ದನೆ? ಎಂಬ ಶಂಕೆ ಇದೀಗ ವ್ಯಕ್ತವಾಗುತ್ತಿದೆ.

ಈ ಬಗ್ಗೆ ತನಿಖೆ ನಡೆಸಲು ಮುಂದಾಗಿರುವ ಪೋಲೀಸರು ಬಸ್‌ ಚಾಲಕನ ರಕ್ತದ ಮಾದರಿಯನ್ನು ತೆಗೆದುಕೊಂಡು ಲ್ಯಾಬ್‌ಗೆ ಕಳಿಸಿದ್ದಾರೆ. ವೈದ್ಯಕೀಯ ವರದಿಗಳು ಬಂದ ನಂತರ ’ಡ್ರೈವರ್‌ ಮಧ್ಯಪಾನ ಮಾಡಿ ಬಸ್‌ ಚಾಲನೆ ಮಾಡುತ್ತಿದ್ದನೆ? ಅಥವ ನಿಜವಾಗಿಯೂ ಇದೊಂದು ಅಕಸ್ಮಾತಾಗಿ ಆಗಿರುವ ಅವಘಡವೇ? ಎಂಬುದರ ಬಗ್ಗೆ’ ಸ್ಪಷ್ಟ ಮಾಹಿತಿ ಹೊರ ಬೀಳಲಿದೆ.

ಬಸ್‌ ಅವಘಡದ ವೇಳೆಯಲ್ಲಿ ಚಾಲಕನಿಗೂ ಗಾಯಗಳಾಗಿದ್ದು, ಅಕಸ್ಮಾತಾಗಿ ಬಚಾವ್ ಆಗಿದ್ದಾನೆ. ಚಾಲಕ ಸೇರಿದಂತೆ ಐವರು ಮಂದಿ ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ