ಆಟೋ ಎಲ್‌ಪಿಜಿ ದರ ಏರಿಕೆ ಖಂಡಿಸಿ ಆಟೋ ಚಾಲಕರ ಬೃಹತ್ ರ‌್ಯಾಲಿ

ಶನಿವಾರ, 25 ಜನವರಿ 2014 (13:18 IST)
PR
PR
ಬೆಂಗಳೂರು: ಆಟೋ ಎಲ್‌ಪಿಜಿ ದರ ಏರಿಕೆ ಖಂಡಿಸಿ ಆಟೋ ಚಾಲಕರ ಬೃಹತ್ ರ‌್ಯಾಲಿ ಬೆಂಗಳೂರಿನಲ್ಲಿ ನಡೆಯುತ್ತಿದೆ. ರ‌್ಯಾಲಿಯಿಂದಾಗಿ ರೈಲ್ವೆ ನಿಲ್ದಾಣದ ಸುತ್ತಮುತ್ತ ಟ್ರಾಫಿಕ್ ಜ್ಯಾಂ ಆಗಿದೆ. ವಿವಿಧ ಆಟೋಚಾಲಕರ ಸಂಘಟನೆಗಳು ಈ ಪ್ರತಿಭಟನೆಯಲ್ಲಿ ಪಾಲ್ಕೊಂಡಿವೆ. ಆಟೋ ಚಾಲಕರ ಮುಷ್ಕರದಲ್ಲಿ ಒಬ್ಬ ಆಟೋ ಚಾಲಕ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕೂಡ ನಡೆದಿದೆ. ಲಕ್ಷ್ಮೀನಾರಾಯಣ ಎಂಬ ಆಟೋಚಾಲಕ ವಿಷಸೇವನೆ ಮಾಡಿ ಅಸ್ವಸ್ಥನಾಗಿದ್ದರಿಂದ ಅವನನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಲಕ್ಷ್ಮೀನಾರಾಯಣ ಆನಂದ್ ರಾವ್ ವೃತ್ತದಲ್ಲಿ ವಿಷಸೇವನೆ ಮಾಡಿದ್ದರಿಂದ ಕೂಡಲೇ ಅವನನ್ನು ಕೆ.ಸಿ. ಜನರಲ್ ಆಸ್ಪತ್ರೆಗೆ ಸೇರಿಸಲಾಗಿದೆ. ಆಟೋ ಮುಷ್ಕರದಿಂದಾಗಿ 24 ಗಂಟೆಗಳು ಆಟೋಸಂಚಾರ ಬಂದ್ ಆಗಿದೆ.

ಎಲ್‌ಪಿಜಿ ದರ ಏರಿಕೆಯಿಂದ ಆಟೋ ಚಾಲಕರ ಆದಾಯಕ್ಕೆ ತೀವ್ರ ಪೆಟ್ಟು ಬಿದ್ದಿದ್ದು, ದರವನ್ನು ಕೂಡಲೇ ಇಳಿಸಬೇಕೆಂದು ಆಗ್ರಹಿಸಿದ್ದಾರೆ. ಬೆಂಗಳೂರಿನ ಸಮೀಪದ ಊರುಗಳಿಂದ ಆಟೋ ಚಾಲಕರು ಬಂದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ.

ವೆಬ್ದುನಿಯಾವನ್ನು ಓದಿ