ಆದಿಚುಂಚನಗಿರಿ ಮೇಲೆ ಐಟಿ ದಾಳಿ ಖಂಡಿಸಿ ಮಂಡ್ಯ ಬಂದ್

ಶನಿವಾರ, 27 ಜುಲೈ 2013 (12:39 IST)
WD
WD
ಮಂಡ್ಯ: ಆದಿಚುಂಚನಗಿರಿ ಮಠದ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿಯನ್ನು ಖಂಡಿಸಿ ಶನಿವಾರ ಕರೆ ನೀಡಿದ್ದ ಮಂಡ್ಯ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಂಗಡಿ, ಮುಂಗಟ್ಟುಗಳನ್ನು ಎಲ್ಲೆಡೆ ಮುಚ್ಚಲಾಗಿದ್ದರೂ, ಶಾಲಾ, ಕಾಲೇಜುಗಳು ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಿದವು.

ರಸ್ತೆಯಲ್ಲಿ ಆಟೋಗಳ ಸಂಚಾರ ಎಂದಿನಂತಿದ್ದು, ಆಟೋಗಳಿಗೆ ಬಂದ್ ಬಿಸಿ ತಟ್ಟಿದಂತೆ ಕಾಣಲಿಲ್ಲ. ದಾಳಿಯ ಹಿಂದೆ ಷಡ್ಯಂತ್ರವಿದೆ ಎಂಬ ಆರೋಪವೂ ಕೇಳಿಬಂದಿತ್ತು. ವಿವಿಧ ಒಕ್ಕಲಿಗ ಸಂಘಟನೆಗಳು ಈ ಬಂದ್‌ಗೆ ಕರೆ ನೀಡಿ, ಆದಿಚುಂಚನಗಿರಿ ಮಠಕ್ಕೆ ಸೇರಿದ ಸಂಸ್ಥೆಗಳ ಮೇಲೆ ಐಟಿ ದಾಳಿಯ ವಿರುದ್ಧ ಪ್ರತಿಭಟನೆ ಸೂಚಿಸಿದವು.

ವೆಬ್ದುನಿಯಾವನ್ನು ಓದಿ