ಆಸ್ತಿ ತೆರಿಗೆಯನ್ನು ಕಟ್ಟುವುದು ಇನ್ನುಮುಂದೆ ಸಲೀಸು

ಮಂಗಳವಾರ, 20 ಆಗಸ್ಟ್ 2013 (20:31 IST)
PR
PR
ಬೆಂಗಳೂರು: ಇನ್ನು ಮೇಲೆ ಉದ್ದುದ್ದ ಕ್ಯೂನಲ್ಲಿ ನಿಲ್ಲಬೇಕಾದ ಅನಿವಾರ್ಯತೆ ಇಲ್ಲ. ನಗರ ಕಾರ್ಪೊರೇಷನ್ ಕಚೇರಿಗಳಲ್ಲಿ ನಿಮ್ಮ ಕೆಲಸದ ವೇಳೆಯನ್ನು ವ್ಯರ್ಥ ಮಾಡುವ ಅಗತ್ಯವಿಲ್ಲ. ಆಯ್ದ ಬ್ಯಾಂಕ್‌ಗಳ ಶಾಖೆಗಳಿಗೆ ಬೆಂಗಳೂರಿಗರು ಪ್ರವೇಶಿಸಿ ತಮ್ಮ ಆಸ್ತಿ ತೆರಿಗೆಯನ್ನು ಸುಸೂತ್ರವಾಗಿ ಕಟ್ಟಬಹುದು. ಮೇಯರ್ ಡಿ.ವೆಂಕಟೇಶ್ ಮೂರ್ತಿ ಮಿಷನ್ ರಸ್ತೆಯ ಐಡಿಬಿಐ ಬ್ಯಾಂಕ್ ಮತ್ತು ಜೆ.ಸಿ. ರಸ್ತೆಯ ಕಾರ್ಪೊರೇಷನ್ ಬ್ಯಾಂಕ್‌ನಲ್ಲಿ ಈ ಸೌಲಭ್ಯವನ್ನು ಉದ್ಘಾಟಿಸಿದರು. ಆರಂಭದಲ್ಲಿ ನಗರ ಪೌರರು ಆಸ್ತಿ ತೆರಿಗೆಯನ್ನು ನಗರದ 50 ಶಾಖೆಗಳಲ್ಲಿ ಕಟ್ಟಬಹುದು.

ಅಕ್ಟೋಬರ್‌ನಲ್ಲಿ ಈ ಸೌಲಭ್ಯವನ್ನು 350 ಶಾಖೆಗಳಿಗೆ ವಿಸ್ತರಿಸಲಾಗುವುದು.ಬಿಬಿಎಂಪಿ 13 ಬ್ಯಾಂಕ್‌ಗಳ ಜತೆ ಒಪ್ಪಂದ ಮಾಡಿಕೊಂಡಿದೆ. ಆಸ್ತಿ ತೆರಿಗೆ ಪಾವತಿ ಸರಾಗಗೊಳಿಸುವುದು ಇದರ ಉದ್ದೇಶವಾಗಿದೆ. ಪೌರರು ತಮ್ಮ ಡೆಬಿಟ್, ಕ್ರೆಡಿಟ್ ಕಾರ್ಡ್ ಬಳಸಿ ತೆರಿಗೆಗಳನ್ನು ಕಟ್ಟಬಹುದು. ತೆರಿಗೆಗಳನ್ನು ಕಟ್ಟಲು ನಾಗರಿಕರು ಆಸ್ತಿ ಗುರುತು ಸಂಖ್ಯೆಗಳನ್ನು ಮತ್ತು ಆರ್‌ಆರ್ ಸಂಖ್ಯೆಗಳನ್ನು ಕೀ ಮಾಡಬೇಕು. ಹಾಗೆ ಮಾಡಿದಾಗ ಆಸ್ತಿಯ ವಿವರಗಳು ಲಭ್ಯವಾಗುತ್ತದೆ.

ವೆಬ್ದುನಿಯಾವನ್ನು ಓದಿ