ಇಂಟರ್ನೆಟ್‌ನಲ್ಲಿ ನಗ್ನ ಚಿತ್ರ ಅಪಲೋಡ್ ಬೆದರಿಕೆ: ಯುವಕನಿಗೆ ಬಿತ್ತು ಗೂಸಾ

ಸೋಮವಾರ, 31 ಮಾರ್ಚ್ 2014 (18:51 IST)
ಧಾರವಾಡ: ನಗ್ನ ಚಿತ್ರವನ್ನು ಇಂಟರ್‌ನೆಟ್‌ಗೆ ಅಪಲೋಡ್ ಮಾಡುವುದಾಗಿ ಯುವತಿಯೊಬ್ಬಳಿಗೆ ಬೆದರಿಕೆ ಹಾಕಿದ ಧಾರವಾಡ ಮೂಲದ ದರ್ಶನ್ ಎಂಬ ಯುವಕನಿಗೆ ಶ್ರೀರಾಮಸೇನೆ ಕಾರ್ಯಕರ್ತರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಯುವತಿಯನ್ನು ಬ್ಲಾಕ್‌ಮೇಲ್ ಮಾಡಿದವನಿಗೆ ಕಾರ್ಯಕರ್ತರು ಚೆನ್ನಾಗಿ ಧರ್ಮದೇಟು ನೀಡಿದರು. ಪರಿಚಯಸ್ಥ ಯುವತಿಯೊಂದಿಗೆ ಸಲುಗೆ ಬೆಳೆಸಿದ ಯುವಕನ ಬಳಿ ಯುವತಿಯ ಫೋಟೊ ಇತ್ತು. ಆ ಫೋಟೋವನ್ನು ಮಿಕ್ಸ್ ಮಾಡಿ ಇಂಟರ್ನೆಟ್‌ನಲ್ಲಿ ಹಾಕುತ್ತೇನೆಂದು ಬೆದರಿಕೆ ಹಾಕಿ ಒಂದು ಲಕ್ಷ ರೂ. ಕೊಡುವಂತೆ ಒತ್ತಾಯಿಸಿದ್ದ.

ಒಂದು ಲಕ್ಷ ರೂ. ಕೊಡದಿದ್ದರೆ ನಿನ್ನ ನಗ್ನ ಫೋಟೋವನ್ನು ಇಂಟರ್‌ನೆಟ್‌ನಲ್ಲಿ ಅಪಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದ. ಈ ವಿಷಯವು ಶ್ರೀರಾಮಸೇನೆ ಕಾರ್ಯಕರ್ತರ ಗಮನಕ್ಕೆ ಬಂತು. ಬೆಳಗಾವಿಗೆ ಅವನನ್ನು ಉಪಾಯವಾಗಿ ಕರೆಸಿಕೊಂಡು ಅವನಿಗೆ ಶ್ರೀರಾಮಸೇನೆ ಕಾರ್ಯಕರ್ತರು ಹಿಗ್ಗಾಮುಗ್ಗಾ ಥಳಿಸಿ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.

ವೆಬ್ದುನಿಯಾವನ್ನು ಓದಿ