ಇಂದಿನಿಂದ ಹಂಪಿ ಉತ್ಸವಕ್ಕೆ ಚಾಲನೆ

ಶುಕ್ರವಾರ, 10 ಜನವರಿ 2014 (08:23 IST)
PR
ಇಂದಿನಿಂದ ವಿಜಯನಗರದ ಹಂಪಿ ಉತ್ಸವ ಪ್ರಾರಂಭವವಾಗಲಿದೆ.
ಜನವರಿ 10ರಿಂದ 12ರ ವರೆಗೆ ಮೂರು ದಿನಗಳ ವರೆಗೆ ಹಂಪಿ ಉತ್ಸವ ಆಯೋಜಿಸಲಾಗಿದೆ.

ಇಂದು ಸಂಜೆ 5ಕ್ಕೆ ಮುಖ್ಯಮಂತ್ರಿ ಎಸ್‌.ಸಿದ್ದರಾಮಯ್ಯ ನವರು ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮೂರು ದಿನಗಳ ಕಾಲ ನಡೆಯುವ ಈ ಹಂಪಿ ಉತ್ಸವಕ್ಕೆ ಹಂಪಿ ನವ ವಧುನಿನಂತೆ ಅಲಂಕಾರಗೊಂಡು ಪ್ರವಾಸಿಕರ ಮನವನ್ನು ಸೆಳೆಯುತ್ತಿದೆ.

ಶ್ರೀಕೃಷ್ಣದೇವರಾಯ, ಎಂ.ಪಿ. ಪ್ರಕಾಶ್ ವೇದಿಕೆಗಳು, ಶ್ರೀ ವಿದ್ಯಾರಣ್ಯ ವೇದಿಕೆ ಹಾಗೂ ಹಕ್ಕ-ಬುಕ್ಕ ವೇದಿಕೆಗಳೂ ಪ್ರಮುಖ ವೇದಿಕೆಗಳಾಗಿವೆ.

ವೆಬ್ದುನಿಯಾವನ್ನು ಓದಿ