ಇನ್ನು ಬಡವಿದ್ಯಾರ್ಥಿಗಳಿಗೆ ಎಂಜಿನಿಯರಿಂಗ್ ಬರೀ ಕನಸು ಮಾತ್ರ

ಸೋಮವಾರ, 16 ಡಿಸೆಂಬರ್ 2013 (12:36 IST)
PR
PR
ಬೆಂಗಳೂರು: ಖಾಸಗಿ ಕಾಲೇಜುಗಳಲ್ಲಿ ಸರ್ಕಾರಿ ಕೋಟಾದಲ್ಲಿ ಸೀಟು ಪಡೆಯುವ ಬಡ ಮಕ್ಕಳ ಕನಸು ಕನಸಾಗಿಯೇ ಉಳಿಯಲಿದೆ. ಏಕೆಂದರೆ ಖಾಸಗಿ ಕಾಲೇಜುಗಳಲ್ಲಿ ಸರ್ಕಾರಿ ಕೋಟಾದ ಸೀಟುಗಳನ್ನು ರದ್ದುಮಾಡಲಾಗಿದೆ. ಸರ್ಕಾರಿ ಕಾಲೇಜು ಎಂಜಿನಿಯರಿಂಗ್ ಶುಲ್ಕ 39 ಸಾವಿರ ರೂ. ಇದ್ದರೆ ಖಾಸಗಿ ಕಾಲೇಜು ಸೀಟು 1 ಲಕ್ಷ 25 ಸಾವಿರ ರೂ. ಇರುತ್ತದೆ. ವೈದ್ಯಕೀಯ ಕೋರ್ಸ್‌ಗೆ ಸರ್ಕಾರಿ ಸೀಟು 46 ಸಾವಿರ ರೂ. ಬಡಮಕ್ಕಳಿಗೆ ಸರ್ಕಾರಿ ಕಾಲೇಜು ಮತ್ತು ಅನುದಾನಿತ ಕಾಲೇಜಿನಲ್ಲಿ ಮಾತ್ರ ಸಿಇಟಿ ಸೀಟು ಇನ್ಮುಂದೆ ಲಭ್ಯವಾಗಲಿದೆ.

ಇದರಿಂದಾಗಿ ಸರ್ಕಾರ ಕಾಮೆಡ್ ಕೆ ಲಾಬಿಗೆ ಮಣಿಯಿತೇ ಎಂಬ ಪ್ರಶ್ನೆ ಎದುರಾಗಿದೆ. ಇನ್ನು ಬಡಮಕ್ಕಳು ವೈದ್ಯಕೀಯ, ಎಂಜಿನಿಯರಿಂಗ್ ಓದುವುದು ಗಗನಕುಸುಮವಾಗಲಿದೆ. ಇದನ್ನು ಶಿಕ್ಷಣ ಸಚಿವ ಸಚಿವ ಆರ್.ವಿ.ದೇಶಪಾಂಡೆ ಸಮರ್ಥಿಸಿಕೊಂಡಿದ್ದು, ಇದು 2006ರ ಕಾಯ್ದೆ ಎಂದು ಹೇಳಿದ್ದಾರೆ. ಸರ್ಕಾರ ಏಕಪಕ್ಷೀಯ ನಿರ್ಧಾರವನ್ನು ತೆಗೆದುಕೊಂಡಿದೆ ಎಂಬ ಕೂಗು ಕೇಳಿಬಂದಿದೆ.

ವೆಬ್ದುನಿಯಾವನ್ನು ಓದಿ