ಈಜುಗಾರ ಗೋಪಾಲ್ ಖಾರ್ವಿ ಗಿನ್ನಿಸ್ ದಾಖಲೆ ಸ್ಥಾಪಿಸಿದರು!

ಭಾನುವಾರ, 1 ಡಿಸೆಂಬರ್ 2013 (12:16 IST)
PR
PR
ಕೋಡಿ ಕನ್ಯಾನದ ಗೋಪಾಲ್ ಖಾರ್ವಿ ಎಂಬ ಈಜುಗಾರ ಸೇಂಟ್ ಮೇರೀಸ್ ದ್ವೀಪದಿಂದ ಮಲ್ಪೆ ಕಡಲುತೀರದವರೆಗೆ ಕೈಕಾಲುಗಳಿಗೆ ಕೋಳ ಕಟ್ಟಿಕೊಂಡು 3.7 ಕಿಮೀ ಈಜುವ ಮೂಲಕ ಗಿನ್ನಿಸ್ ದಾಖಲೆಯ ಪುಟಗಳಲ್ಲಿ ಸೇರಿದರು. ಗಿನ್ನಿಸ್ ಅಧಿಕಾರಿಗಳು ಖಾರ್ವಿ ಅವರಿಗೆ ದಾಖಲೆ ಪತ್ರ ವಿತರಣೆ ಮಾಡಿದರು. 2 ಗಂಟೆ 43 ನಿಮಿಷಗಳಲ್ಲಿ ಕೈಕಾಲುಗಳಿಗೆ ಕೋಳ ಹಾಕಿಕೊಂಡು ಈಜಿ ಈ ದೂರವನ್ನು ಅವರು ಕ್ರಮಿಸಿದ್ದಾರೆ. ಈ ಸಾಧನೆಯ ಮೂಲಕ ಖಾರ್ವಿ ವಿಶ್ವದಾಖಲೆಯ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಕಳೆದ ಬಾರಿ ಕೊನೆಯ ಕ್ಷಣದಲ್ಲಿ ಗಿನ್ನಿಸ್ ದಾಖಲೆ ಕೈತಪ್ಪಿದ್ದರಿಂದ ಹತಾಶರಾಗಿದ್ದರೂ ಮತ್ತೆ ಮೈಕೊಡವಿಕೊಂಡು ಮೇಲೆದ್ದು ಈಗ ಸಾಧನೆಯನ್ನು ಮಾಡಿದರು.ಗೋಪಾಲ ಖಾರ್ವಿ ಗಿನ್ನಿಸ್ ಪುಟ ಸೇರಿ ಬಿಟ್ಟರೂ ಎನ್ನುವಷ್ಟರಲ್ಲಿ ಸಣ್ಣ ತಾಂತ್ರಿಕ ಅಡಚಣೆಯಿಂದ ಗಿನ್ನಿಸ್ ರೆಕಾರ್ಡ್ ಗೋಪಾಲ ಖಾರ್ವಿಯವರ ಕೈ ತಪ್ಪಿಹೋಗಿತ್ತು.

ಕೋಡಿ ಕನ್ಯಾನದ ರಾಧಾ ಬಾಯಿ-ನಾಗೇಶ ಖಾರ್ವಿಯವರ ಪುತ್ರ ಈ ಗೋಪಾಲ ಖಾರ್ವಿ . ತನ್ನ ಕೈಯನ್ನು ಬೆನ್ನ ಹಿಂದೆ ಸಂಕೋಲೆಯಿಂದ ಬಂಧಿಸಿ, ಎರಡು ಕಾಲುಗಳನ್ನು ಕಬ್ಬಿಣದ ಕೋಳದಿಂದ ಕಟ್ಟಿ ಸಮುದ್ರದಲ್ಲಿ 15 ಕಿ.ಮೀ ದೂರವನ್ನು ಈಜುವ ಮೂಲಕ ಲಿಮ್ಕಾ ದಾಖಲೆಯ ಪುಸ್ತಕದಲ್ಲಿ ತಮ್ಮ ಹೆಸರನ್ನು ದಾಖಲಿಸಿದ್ದರು. ಈ ಸಾಧನೆಗೆ ರಾಜ್ಯ ಸರ್ಕಾರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ-2011 ನೀಡಿ ಗೌರವಿಸಿತು.

ವೆಬ್ದುನಿಯಾವನ್ನು ಓದಿ