ಈಶ್ವರಪ್ಪ ವಿರುದ್ಧ ಅಕ್ರಮ ಆಸ್ತಿ ಗಳಿಕೆ ತನಿಖೆಗೆ ಮುಖ್ಯಕಾರ್ಯದರ್ಶಿ ಆದೇಶ

ಶುಕ್ರವಾರ, 3 ಜನವರಿ 2014 (16:53 IST)
PR
PR
ಬೆಂಗಳೂರು: ಬಿಜೆಪಿ ಮುಖಂಡ ಈಶ್ವರಪ್ಪ ವಿರುದ್ಧ ಅಕ್ರಮ ಆಸ್ತಿ ಗಳಿಕೆ ತನಿಖೆಗೆ ರಾಜ್ಯ ಮುಖ್ಯಕಾರ್ಯದರ್ಶಿ ಕೌಶಿಕ್ ಮುಖರ್ಜಿ ಆದೇಶ ನೀಡಿದ್ದಾರೆ. ವಿನೋದ್ ಎಂಬವರು ಈಶ್ವರಪ್ಪ ಅವರು ಸಾಕಷ್ಟು ಅಕ್ರಮ ಆಸ್ತಿ ಗಳಿಸಿದ್ದಾರೆ ಎಂದು ದೂರು ನೀಡಿದ್ದರು. ರಾಜ್ಯಪಾಲರ ಕಚೇರಿ ಅದನ್ನು ರಾಜ್ಯಸರ್ಕಾರಕ್ಕೆ ಕಳಿಸಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಬಹುದು ಎಂದು ಹೇಳಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಮುಖ್ಯಕಾರ್ಯದರ್ಶಿ ಕೌಶಿಕ್ ಮುಖರ್ಜಿ ಈಶ್ವರಪ್ಪ ವಿರುದ್ಧ ಅಕ್ರಮ ಆಸ್ತಿ ಗಳಿಕೆ ತನಿಖೆಗೆ ಆದೇಶ ನೀಡಿದ್ದಾರೆ. ಇದಕ್ಕೆ ಮುಂಚೆ ಮಾಜಿ ಉಪಮುಖ್ಯಮಂತ್ರಿ. ಈಶ್ವರಪ್ಪ ವಿರುದ್ಧ ದಾಖಲಾಗಿದ್ದ ಅಕ್ರಮ ಆಸ್ತಿ ಗಳಿಕೆ ಪ್ರಕರಣವನ್ನು ಹೈಕೋರ್ಟ್‌ ತಾಂತ್ರಿಕ ಕಾರಣಗಳಿಂದಾಗಿ ಮುಂದುವರೆಸಿರಲಿಲ್ಲ.

ಕಳೆದ ಡಿಸೆಂಬರ್‌ನಲ್ಲಿ ಈಶ್ವರಪ್ಪ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಕುರಿತಂತೆ ಲೋಕಾಯುಕ್ತ ನ್ಯಾಯಾಲಯದಲ್ಲಿ ದೂರು ದಾಖಲಿಸಲಾಗಿತ್ತು. ಆದರೆ ರಾಜ್ಯಪಾಲರ ಪೂರ್ವಾನುಮತಿ ಪಡೆಯದೇ ಇದ್ದ ತಾಂತ್ರಿಕ ಅಂಶವನ್ನು ಹೈಕೋರ್ಟ್‌ ಎತ್ತಿ ತೋರಿಸಿದ್ದರಿಂದ ತಾವು ದೂರನ್ನು ಹಿಂಪಡೆದೆ ಎಂದು ವಿನೋದ್ ಹೇಳಿದ್ದರು. ಈಗ ಈಶ್ವರಪ್ಪನವರು ಶಾಸಕರಾಗಿಲ್ಲದೆ ಇರುವುದರಿಂದ ದೂರು ದಾಖಲಿಸಲು ರಾಜ್ಯಪಾಲರ ಅನುಮತಿಯ ಅಗತ್ಯವಿಲ್ಲ.

ವೆಬ್ದುನಿಯಾವನ್ನು ಓದಿ