ಉಳ್ಳಾಲದಲ್ಲಿ ಗುಂಪು ಘರ್ಷಣೆ: ನಿಷೇಧಾಜ್ಞೆ ಜಾರಿ

ಶುಕ್ರವಾರ, 7 ಫೆಬ್ರವರಿ 2014 (17:29 IST)
PR
PR
ಮಂಗಳೂರು: ಮಂಗಳೂರಿನ ಉಳ್ಳಾಲದಲ್ಲಿ ಎರಡು ಗುಂಪುಗಳು ನಡುವೆ ಘರ್ಷಣೆ ಪ್ರಕರಣ ವರದಿಯಾಗಿದೆ. ಪರಿಸ್ಥಿತಿ ನಿಯಂತ್ರಣದಲ್ಲಿದ್ದು ಕರ್ಪ್ಯೂ ಜಾರಲಿ ಮಾಡಿಲ್ಲ. ಉಳ್ಲಾಲದಲ್ಲಿ ರಾತ್ರಿ 10ವರೆಗೆ ನಿಷೇಧಾಜ್ಞೆ ಜಾರಿಯಾಗಿದೆ. ಪ್ರಾರ್ಥನಾ ಮಂದಿರಗಳಿಗೆ ಪ್ರಾರ್ಥನೆಗೆ ತೆರಳಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಗುಂಪು ಘರ್ಷಣೆ ಸಂಬಂಧ 79 ಜನರನ್ನು ಪೊಲೀಸರು ವಂಶಕ್ಕೆ ತೆಗೆದುಕೊಂಡಿದ್ದಾರೆ.

ಇಬ್ಬರು ಎಸ್ಪಿ, 17 ಕೆಎಸ್‌ಆರ್‌ಪಿ ತುಕಡಿ ನಿಯೋಜಿಸಲಾಗಿದೆ. ಹಾಸನ ಶಿವಮೊಗ್ಗದಿಂದ ಕೆಎಸ್‌ಆರ್‌ಪಿ ತುಕಡಿ ಆಗಮಿಸಿವೆ ಎಂದು ನಗರ ಪೊಲೀಸ್ ಆಯುಕ್ತ ಹಿತೇಂದ್ರ ಹೇಳಿದ್ದಾರೆ. ನಿಷೇಧಾಜ್ಞೆ ಉಲ್ಲಂಘನೆ ಮಾಡಬಾರದೆಂದು ಎಚ್ಚರಿಸಲಾಗಿದೆ. ಸ್ಥಳದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ.

ವೆಬ್ದುನಿಯಾವನ್ನು ಓದಿ