ಎಚ್‌ಐವಿ ಪೀಡಿತ ವ್ಯಕ್ತಿ ಆಸ್ಪತ್ರೆ ಮಹಡಿಯಿಂದ ಬಿದ್ದು ಆತ್ಮಹತ್ಯೆ

ಬುಧವಾರ, 18 ಡಿಸೆಂಬರ್ 2013 (17:30 IST)
PR
PR
ಗದಗ: ಎಚ್‌ಐವಿ ಪೀಡಿತ ವ್ಯಕ್ತಿ ಗದಗಿನ ಆಸ್ಪತ್ರೆಯ ನಾಲ್ಕನೇ ಮಹಡಿಯಿಂದ ಕೆಳಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎಚ್‌ಐವಿ ಪೀಡಿತ ವ್ಯಕ್ತಿಯನ್ನು ಚಿಕಿತ್ಸೆಗಾಗಿ ದಾಖಲು ಮಾಡಲಾಗಿತ್ತು. ಇವರನ್ನು ಶಿವಕುಮಾರ ಹಂಚಿನಾಳ ಎಂದು ಗುರುತಿಸಲಾಗಿದೆ. ಬಿಂಕದಕಟ್ಟಿದ ಗದಗ್ ಜಿಲ್ಲಾಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಇವರು ನೀರಲಗಿ ಗ್ರಾಮದವರೆಂದು ಹೇಳಲಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಳೆದ ಸುಮಾರು ಒಂದು ವರ್ಷದಿಂದ ಎಚ್‌ಐವಿ ರೋಗಬಾಧೆ ಇತ್ತು. ಸ್ನೇಹಿತರೊಂದಿಗೆ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳುತ್ತಿದ್ದ. ಇವನು ತುಂಬಾ ನಿತ್ರಾಣನಾಗಿದ್ದರಿಂದ ರಕ್ತವನ್ನು ಕೂಡ ಕೊಡಲಾಗುತ್ತಿತ್ತು.

ವೆಬ್ದುನಿಯಾವನ್ನು ಓದಿ