ಎಟಿಎಂ ಕೇಂದ್ರಗಳಲ್ಲಿ ಸಿಸಿಟಿವಿ ಅಳವಡಿಕೆಗೆ 45 ದಿನಗಳ ಗಡುವು

ಗುರುವಾರ, 28 ನವೆಂಬರ್ 2013 (13:36 IST)
PR
PR
ಬೆಂಗಳೂರು: ಎಟಿಎಂ ಕೇಂದ್ರಗಳ ಭದ್ರತೆಗೆ 45 ದಿನಗಳ ಗಡುವು ನೀಡಿರುವುದಾಗಿ ನಗರ ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್ ತಿಳಿಸಿದ್ದಾರೆ. ಪೊಲೀಸರು ಈಗಾಗಲೇ ಎಟಿಎಂ ಕೇಂದ್ರಗಳನ್ನು ಮುಚ್ಚಿದ್ದಾರೆ. ಬ್ಯಾಂಕ್‌ಗಳ ಮನವಿ ಹಿನ್ನೆಲೆಯಲ್ಲಿ ಭದ್ರತೆಗೆ ಮತ್ತೆ 45 ದಿನಗಳ ಗಡುವು ವಿಸ್ತರಿಸಲಾಗಿದೆ. ಆದರೆ ಸೆಕ್ಯೂರಿಟಿ ಗಾರ್ಡ್ ಇಲ್ಲದ ಎಟಿಎಂಗಳನ್ನು ಮರುತೆರೆಯಲು ಬಿಡುವುದಿಲ್ಲ ಎಂದು ಔರಾದ್ಕರ್ ಹೇಳಿದ್ದಾರೆ. ಸೆಕ್ಯೂರಿಟಿ ಗಾರ್ಡ್ ಇರುವ ಎಟಿಎಂಗಳಿಗೆ ಮಾತ್ರ ಮರುತೆರೆಯುವುದಕ್ಕೆ ಅವಕಾಶ ನೀಡಲಾಗುತ್ತದೆ. ಟೆಂಡರ್ ಪ್ರಕ್ರಿಯೆಗೆ ಸಮಯ ಬೇಕಾಗುತ್ತದಾದ್ದರಿಂದ ಸಿಸಿ ಟಿವಿ ಕ್ಯಾಮೆರಾ, ಅಲಾರ್ಮ್ ಅಳವಡಿಕೆಗೆ 45 ದಿನಗಳು ಗಡುವು ನೀಡಲಾಗಿದೆ ಎಂದು ಔರಾದ್ಕರ್ ತಿಳಿಸಿದರು.

ಬೆಂಗಳೂರಿನ ಕಾರ್ಪೋರೇಷನ್ ಎಟಿಎಂ ಕೇಂದ್ರದಲ್ಲಿ ಮಹಿಳೆಯೊಬ್ಬರ ಮೇಲೆ ಹಲ್ಲೆ ಮಾಡಿದ ಬಳಿಕ ಎಟಿಎಂ ಕೇಂದ್ರಗಳಲ್ಲಿ ಮೂರು ದಿನಗಳಲ್ಲಿ ಸೆಕ್ಯೂರಿಟಿ ಒದಗಿಸದಿದ್ದರೆ ಮುಚ್ಚುವುದಾಗಿ ಒರಾದ್ಕರ್ ತಿಳಿಸಿದ್ದರು. ಆದರೆ ಸೆಕ್ಯೂರಿಟಿ ಒದಗಿಸದ ಸುಮಾರು 1000 ಎಟಿಎಂ ಕೇಂದ್ರಗಳನ್ನು ಬಂದ್ ಮಾಡಲಾಗಿತ್ತು.

ವೆಬ್ದುನಿಯಾವನ್ನು ಓದಿ