ಎಲ್‌ಪಿಜಿ ಸಂಪರ್ಕ ರದ್ದು ಆದೇಶಕ್ಕೆ ಮುಖ್ಯಮಂತ್ರಿ ತಡೆ

ಮಂಗಳವಾರ, 18 ಅಕ್ಟೋಬರ್ 2011 (17:36 IST)
ರಾಜ್ಯದಲ್ಲಿರುವ ವಾರಸುದಾರರಿಲ್ಲದ 24.36 ಲಕ್ಷ ಅಡುಗೆ ಅನಿಲ (ಎಲ್‌ಪಿಜಿ) ಸಂಪರ್ಕಗಳನ್ನು ರದ್ದುಪಡಿಸುವ ಆಹಾರ ಮತ್ತು ನಾಗರಿಕ ಇಲಾಖೆಯ ಕ್ರಮಕ್ಕೆ ಮುಖ್ಯಮಂತ್ರಿ ಸದಾನಂದ ಗೌಡ ಅವರೇ ತಡೆಯೊಡ್ಡಿದ್ದಾರೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಕೇಂದ್ರ ಸರಕಾರ ರಾಜ್ಯದ ಜನರಿಗೆ ರಿಯಾಯಿತಿ ದರದಲ್ಲಿ ವಿತರಿಸುತ್ತಿರುವ ಸೌಲಭ್ಯಕ್ಕೆ ನಾವೇಕೆ ಕತ್ತರಿ ಹಾಕಬೇಕು ಎಂದು ಸೋಮವಾರ ರಾತ್ರಿ ಸಚಿವರೊಂದಿಗೆ ಸಭೆ ನಡೆಸಿದ ಸಂದರ್ಭದಲ್ಲಿ ಮಾತನಾಡಿದ ಸಿಎಂ ಸದಾನಂದ ಗೌಡರು ಪ್ರಶ್ನಿಸಿದ್ದಾರೆ ಎನ್ನಲಾಗಿದೆ.

ಸಭೆಯಲ್ಲಿ ಭಾಗವಹಿಸಿದ್ದ ಸಚಿವ ಜಗದೀಶ್‌ ಶೆಟ್ಟರ್ ಅವರು ಅಡುಗೆ ಅನಿಲ ಸಂಪರ್ಕ ರದ್ದುಗೊಳಿಸುವ ಪ್ರಸ್ತಾವನೆಗೆ ವಿರೋಧ ವ್ಯಕ್ತಪಡಿಸಿದರು. ಇದನ್ನು ಬೆಮಬಲಿಸಿದ ಸಿಎಂ ಎಲ್‌ಪಿಜಿ ಸಂಪರ್ಕ ರದ್ದು ಆದೇಶಕ್ಕೆ ತಡೆ ಹಿಡಿಯುವಂತೆ ಇಲಾಖೆಗೆ ಸೂಚನೆ ನೀಡಿದ್ದಾರೆ. ಆಹಾರ ಮತ್ತು ನಾಗರಿಕ ಇಲಾಖೆ ಸಚಿವೆ ಶೋಭಾ ಕರಂದ್ಲಾಜೆ ಅವರೂ ಹಾಜರಿದ್ದರು.

ಆರ್‌ಆರ್‌ ಸಂಖ್ಯೆ ಹಾಗೂ ವಿಳಾಸದ ಪುರಾವೆ ನೀಡದೇ ಇರುವ 24,36,751 ಅಡುಗೆ ಅನಿಲ ಸಂಪರ್ಕಗಳನ್ನು ರದ್ದುಪಡಿಸುವಂತೆ ಆಹಾರ ಮತ್ತು ಪಡಿತರ ಇಲಾಖೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿತ್ತು.

ವೆಬ್ದುನಿಯಾವನ್ನು ಓದಿ