ಏನ್ರೀ, ಈ ಬಜೆಟ್ ಮಂಡಿಸಲು ಜಗಳವಾಡಬೇಕಿತ್ತಾ?: ಸಿದ್ದರಾಮಯ್ಯ

ಗುರುವಾರ, 29 ಮಾರ್ಚ್ 2012 (13:40 IST)
PR
ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಮಂಡಿಸಿರುವ ಪ್ರಸಕ್ತ ಸಾಲಿನ ರಾಜ್ಯ ಬಜೆಟ್ ಅಭಿವೃದ್ಧಿಗೆ ಮಾರಕ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.

ಕೇವಲ ಜನರನ್ನು ಭ್ರಮಾಲೋಕದಲ್ಲಿ ಇಡುವ ಏಕೈಕ ಉದ್ದೇಶದಿಂದ ಒಂದು ಲಕ್ಷ ಕೋಟಿ ರೂಪಾಯಿ ಮೀರಿದ ಬಜೆಟ್ ಮಂಡಿಸಿದ್ದಾರೆ. ಅಭಿವೃದ್ಧಿಗೆ ಪೂರಕವಲ್ಲದ ಈ ಬಜೆಟ್ ಮಂಡಿಸಲು ಮುಖ್ಯಮಂತ್ರಿ ಸ್ಥಾನಕ್ಕಾಗಿ ಇಷ್ಟೊಂದು ಜಗಳವಾಡಬೇಕಿತ್ತೇ ಎಂದು ಪ್ರಶ್ನಿಸಿದರು.

ಬಜೆಟ್ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ಬಜೆಟ್‌ನಲ್ಲಿ ವಿದ್ಯುತ್ ಸಬ್ಸಿಡಿಗೆ 5,100 ಕೋಟಿ ನಿಗದಿಪಡಿಸಿರುವ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ವಿದ್ಯುತ್ ಸಬ್ಸಿಡಿಗೆ ಈ ಬಾರಿ ಸರ್ಕಾರ ನಿಗದಿಪಡಿಸಿದ ಮೊತ್ತ ಮೂರು ವರ್ಷದ ಹಿಂದೆ ಇದ್ದ ಮೊತ್ತಕ್ಕಿಂತ ದ್ವಿಗುಣವಾಗಿದೆ.

ರೈತರ ಹೆಸರಿನಲ್ಲಿ ನೀಡುವ ಈ ಸಬ್ಸಿಡಿಯ ಹೆಸರಿನಲ್ಲಿ ಪೂರೈಕೆ ಮತ್ತು ಸರಬರಾಜು ನಷ್ಟ, ವಿದ್ಯುತ್ ಕಳ್ಳತನದಿಂದಾಗುವ ನಷ್ಟ ಭರಿಸಲು ಇಷ್ಟೊಂದು ಪ್ರಮಾಣದ ಅನುದಾನ ನಿಗದಿಪಡಿಸಲಾಗಿದೆ ಎಂದು ಆರೋಪಿಸಿದರು. ಇದರ ಬದಲು ಸುಧಾರಣಾ ಕ್ರಮಗಳನ್ನು ಜಾರಿಗೆ ತರುವಂತೆ ಆಘ್ರಹಿಸಿದರು.

ವೆಬ್ದುನಿಯಾವನ್ನು ಓದಿ