'ಐ ಲವ್ ಯು' ಹೇಳಲಿಲ್ಲವೆಂದು ಕಾಲುವೆಗೆ ಹಾರಿದ ಯುವತಿ

ಶನಿವಾರ, 31 ಆಗಸ್ಟ್ 2013 (21:00 IST)
PR
PR
ಬಳ್ಳಾರಿ: ಬಳ್ಳಾರಿಯ ಹೊರವಲಯದ ಕಾಲುವೆಯೊಂದರ ಬಳಿ ಪ್ರೇಮ ಭಿಕ್ಷೆ ಬೇಡಿದ ಯುವತಿ ನಂತರ ಕಾಲುವೆಗೆ ಹಾರಿ ಪ್ರಾಣ ಕಳೆದುಕೊಳ್ಳಲು ಯತ್ನಿಸಿದ ಘಟನೆ ನಡೆದಿದೆ. ಕಾಲುವೆಯ ದಂಡೆಯಲ್ಲಿ ನೆರೆದಿದ್ದ ಸ್ಥಳೀಯರು ಕೂಡಲೇ ಯುವತಿಯನ್ನು ರಕ್ಷಿಸಿ ವಿಮ್ಸ್ ಆಸ್ಪತ್ರೆಗೆ ಸೇರಿಸಿದರು. ಬಳ್ಳಾರಿಯ ಹೊರವಲಯದ ಕಾಲುವೆ ದಂಡೆ ಮೇಲೆ ನಿಂತುಕೊಂಡ ಯುವತಿ ಕಾಲುವೆ ದಂಡೆ ಮೇಲೆ ಸ್ಥಳೀಯರು ಮತ್ತು ಪೋಷಕರು ನೆರೆದಿದ್ದಾಗಲೇ ತನ್ನನ್ನು ಪ್ರೇಮಿಸಿದ ಯುವಕ 'ಐ ಲವ್ ಯು' ಹೇಳಬೇಕೆಂದು ಒತ್ತಾಯಿಸಿದಳು.

ಯುವಕ ನಿರಾಕರಿಸಿದಾಗ ಯುವತಿ ಸಲ್ಮಾ ಕಾಲುವೆಗೆ ಹಾರಿದಳು. ಯುವತಿ ಕಾಲುವೆಗೆ ಹಾರಿದ ದೃಶ್ಯ ಮೊಬೈಲ್‌ನಲ್ಲಿ ಸೆರೆಹಿಡಿಯಲಾಗಿತ್ತು. ಯುವತಿ ಸಲ್ಮಾ ಇನ್ನೂ ಅಸ್ವಸ್ಥಳಾಗಿದ್ದು, ಚೇತರಿಸಿಕೊಂಡಿಲ್ಲ.

ವೆಬ್ದುನಿಯಾವನ್ನು ಓದಿ