ಒಂದು ವರ್ಷದ ಮಗುವಿನ ಮೇಲೆ ಅತ್ಯಾಚಾರವೆಸಗಿದ ಕಾಮುಕ

ಮಂಗಳವಾರ, 1 ಏಪ್ರಿಲ್ 2014 (11:51 IST)
ಬೆಂಗಳೂರಿನ ಜೆ.ಸಿ. ನಗರದಲ್ಲಿರುವ ಪ್ಯಾರಾಚ್ಯೂಟ್ ರೆಜಿಮೆಂಟ್ ತರಬೇತಿ ಕೇಂದ್ರದಲ್ಲಿ ಒಂದು ವರ್ಷದ ಮಗುವಿನ ತಂದೆ ಕೋಮ್ ಎಂಬವರು ಧರಂವೀರ್ ಸಿಂಗ್ ಎಂಬವನ ಬಳಿ ಮಗುವನ್ನು ಬಿಟ್ಟು ಹೊರಗೆ ಹೋಗಿದ್ದರು. ಇಬ್ಬರೂ ಕೂಡ ಇಲ್ಲಿ ಕೆಲಸ ಮಾಡುತ್ತಿದ್ದರಿಂದ ಕೋಮ್ ಧರಂ ಮೇಲೆ ನಂಬಿಕೆ ಇರಿಸಿ ಮಗುವನ್ನು ಬಿಟ್ಟಿದ್ದರು. ಆದರೆ ಧರಂ ಒಂದು ವರ್ಷದ ಮುಗ್ಧ ಮಗುವಿನ ಮೇಲೆ ಅತ್ಯಾಚಾರವೆಸಗಿ ತನ್ನ ಕಾಮದಾಸೆಯನ್ನು ತೀರಿಸಿಕೊಂಡ.

ನಂತರ ಧರಂ ಮಗುವನ್ನು ಹಿಂತಿರುಗಿಸಿದ ಬಳಿ ಮಗು ಅಳುತ್ತಿದ್ದುದನ್ನು ನೋಡಿ ತಾಯಿ ಪರೀಕ್ಷಿಸಿದಾಗ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ವಿಚಾರ ತಿಳಿದುಬಂದು ನಿನ್ನೆ ಈ ಬಗ್ಗೆ ದೂರು ದಾಖಲಿಸಲಾಗಿದ್ದು, ಇಂದು ಧರಂವೀರ್ ಸಿಂಗ್‌ನನ್ನು ಪೊಲೀಸರು ಬಂಧಿಸಿದ್ದು, ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ