ಒಡೆದ ಅಣೆಕಟ್ಟು: ಎಚ್ಚೆತ್ತ ಸರ್ಕಾರದಿಂದ ಎಲ್‌ ಅಂಡ್ ಟಿಗೆ ಗುತ್ತಿಗೆ

ಬುಧವಾರ, 14 ಆಗಸ್ಟ್ 2013 (16:30 IST)
PR
PR
ಮೈಸೂರು: ಮೈಸೂರು ಜಿಲ್ಲೆ ಟಿ ನರಸಿಪುರದ ಮಾಧವಮಂತ್ರಿ ಅಣೆಕಟ್ಟು ಒಡೆದುಹೋಗಿ 13 ದಿನಗಳ ನಂತರ ಸರ್ಕಾರ ಎಚ್ಚೆತ್ತು, ಎಲ್ ಅಂಡ್ ಟಿ ಕಂಪನಿಗೆ ಗುತ್ತಿಗೆ ನೀಡಿದೆ. ಮಾಧವಮಂತ್ರಿ ಅಣೆಕಟ್ಟು ಒಡೆದುಹೋಗಿದ್ದರಿಂದ ತಮಿಳುನಾಡಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿದುಹೋಗುತ್ತಿದೆ. ಟಿ ನರಸಿಪುರ ಸುತ್ತಮುತ್ತ ಮರಳುಗಾರಿಕೆಯಿಂದ ಈ ಅಣೆಕಟ್ಟು ಒಡೆದಿದೆಯೆಂದು ಹೇಳಲಾಗುತ್ತಿದೆ.

ಇದರಿಂದಾಗಿ ರೈತರು ಬಳಸುವ ನಾಲೆಗಳಿಗೆ ನೀರು ಹರಿದುಹೋಗುತ್ತಿಲ್ಲ. ರೈತರ ಬೆಳೆಗಳಿಗೆ ನೀರಿಲ್ಲದೇ ತೀವ್ರ ಸಂಕಷ್ಟದ ಸ್ಥಿತಿಗೆ ಸಿಕ್ಕಿದ್ದಾರೆ.

ರೈತರ 6000 ಎಕರೆ ಬೆಳೆಗಳಿಗೆ ನೀರಿಲ್ಲದೇ ರೈತರು ತೀವ್ರ ಕಂಗಾಲಾಗಿದ್ದಾರೆ. ಕುಡಿಯಲು, ಜನ, ಜಾನುವಾರುಗಳಿಗೆ ನೀರಿಲ್ಲದೇ, ರೈತರು ಬೆಳೆಗೆ ನೀರಿಲ್ಲದೇ ತೀವ್ರ ತೊಂದರೆಯಾಗಿದೆ. ನೀರಾವರಿ ಇಲಾಖೆ ಇಷ್ಟು ದಿನಗಳಾದ ಮೇಲೆ ಎಚ್ಚೆತ್ತುಕೊಂಡು ಎಲ್ ಅಂಡ್ ಟಿಗೆ ಕಾಮಗಾರಿ ಗುತ್ತಿಗೆ ವಹಿಸಿದ್ದಾರೆ. ಆದರೆ ಅಣೆಕಟ್ಟಿನ ದುರಸ್ತಿ ಕಾರ್ಯ ಮುಗಿಯಲು ಇನ್ನೂ 15 ದಿನಗಳು ಹಿಡಿಯಬಹುದು. ಅಲ್ಲಿವರೆಗೆ ನೀರಿಲ್ಲದೇ ಕಂಗಾಲಾಗಿರುವ ರೈತರ ಪಾಡು ಹೇಳತೀರದಾಗಿದೆ.

ವೆಬ್ದುನಿಯಾವನ್ನು ಓದಿ