ಒಡೆಯರ್‌ಗೆ ಸೇರಿದ್ದ 30 ಕೋಟಿ ಮೌಲ್ಯದ ನಿವೇಶನ ಕಬಳಿಸಿದ ಕದೀಮರು

ಶುಕ್ರವಾರ, 28 ಮಾರ್ಚ್ 2014 (17:32 IST)
PR
PR
ಮೈಸೂರು: ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಸಾಯುವುದಕ್ಕೆ ಮೂರು ದಿನಗಳ ಹಿಂದೆ ಅವರಿಗೆ ಸೇರಿದ್ದ 200x250 ಚದರಡಿಯ 30 ಕೋಟಿ ರೂ. ಬೆಲೆಬಾಳುವ ಆಸ್ತಿಯನ್ನು ಕಬಳಿಸುವ ಸಂಚು ನಡೆಸಿದ ಸಂಗತಿ ಬಯಲಾಗಿದೆ. ಮೈಸೂರಿನವರಾದ ಡಿ.ಕೆ. ಸುಂದರ್ ಎಂಬವರ ಹೆಸರಿನಲ್ಲಿ ಒಡೆಯರ್ ಮಾಲೀಕತ್ವದ ನಿವೇಶನವನ್ನು ನೋಂದಣಿ ಮಾಡಲಾಗಿತ್ತು. ಫೋರ್ಜರಿ ದಾಖಲಾತಿ ಸೃಷ್ಟಿಸಿ ನಿವೇಶವನ್ನು ಕಬಳಿಸಲಾಗಿತ್ತು. ನೋಂದಣಾಧಿಕಾರಿ ಗಿರೀಶ್ ಎಂಬವರು ಷಾಮೀಲಾಗಿ ಈ ನಿವೇಶನ ಕಬಳಿಸಲಾಗಿದೆ.

ಲೋಕಾಯುಕ್ತ ಪೊಲೀಸರ ವಿಚಾರಣೆ ಸಂದರ್ಭದಲ್ಲಿ ಒಡೆಯರ್ ಸ್ವತಃ ಸಹಿ ಮಾಡಿದ್ದು ತಾವು ನೋಂದಣಿ ಮಾಡಿಸಿದ್ದಾಗಿ ಗಿರೀಶ್ ಹೇಳಿದ್ದಾರೆ. ಆದರೆ ಉಪಲೋಕಾಯುಕ್ತರ ತನಿಖೆಯಲ್ಲಿ ಫೋರ್ಜರಿ ಮಾಡಿರುವುದು ಬೆಳಕಿಗೆ ಬಂದಿದೆ. ಸುಂದರ್ ಮೈಸೂರಿನ ವಿದ್ಯಾರಣ್ಯಪುರ ನಿವಾಸಿಯಾಗಿದ್ದು ನಿವೇಶನವು ರೇಸ್‌ಕೋರ್ಸ್ ಪಕ್ಕದಲ್ಲಿದೆ. ಜಮೀನು ಕಬಳಿಕೆ ವಿರುದ್ಧ ವಕೀಲ ಚಂದ್ರಶೇಖರ್ ಎಂಬವರು ದೂರು ನೀಡಿದ ನಂತರ ಈ ವಿಚಾರ ಬೆಳಕಿಗೆ ಬಂದಿದೆ.

ವೆಬ್ದುನಿಯಾವನ್ನು ಓದಿ