ಕಟ್ಟಡ ನೆಲಸಮಗೊಳಿಸುವ ಕಾರ್ಯಾಚರಣೆಗೆ ಸ್ಥಳೀಯರ ಅಡ್ಡಿ

ಮಂಗಳವಾರ, 20 ಆಗಸ್ಟ್ 2013 (11:33 IST)
PR
PR
ಬೆಂಗಳೂರು: ಸೋಮೇಶ್ವರ ನಗರದಲ್ಲಿ ಸೋಮವಾರ ಕುಸಿದುಬಿದ್ದ ಕಟ್ಟಡದ 6 ಅಂತಸ್ತಿನ ಅಪಾರ್ಟ್‌ಮೆಂಟ್ ಅವಶೇಷದಿಂದ ಮೂವರ ಶವಗಳ ಪೈಕಿ ಒಬ್ಬರ ಶವ ಹೊರತೆಗೆಯಲಾಗಿದೆ. ಮೃತ ಕಾರ್ಮಿಕರನ್ನು ರಾಯಚೂರು ಸುಲ್ತಾ‌ನ್‌ಪುರದ ನಿವಾಸಿ ನಾಗಮ್ಮ(50), ಒಡಿಶಾದ ನೇಪಾಲ್ ಪಾಸ್ವಾನ್ ಮತ್ತು ಪಶ್ಚಿಮಬಂಗಾಳದ ನಿರಂಜನ್ ಎಂದು ಗುರುತಿಸಲಾಗಿದೆ.

ಕಟ್ಟಡವು ಸಂಪೂರ್ಣ ಕುಸಿಯುವ ಹಂತದಲ್ಲಿರುವುದರಿಂದ ಮಂಗಳವಾರ ಬೆಳಿಗ್ಗೆ ಬಿಬಿಎಂಪಿ ಅಧಿಕಾರಿಗಳು ಕಟ್ಟಡವನ್ನು ನೆಲಸಮಗೊಳಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಆದರೆ ಕಟ್ಟಡ ತೆರವಿಗೆ ಸ್ಥಳೀಯರು ಅಡ್ಡಿಪಡಿಸಿದ್ದಾರೆ. ಕಾರ್ಯಾಚರಣೆ ವೇಳೆ ಪಕ್ಕದ ಮನೆಯ ಗೋಡೆಗೆ ಹಾನಿಯಾಗಿದೆ. ಈ ಹಿನ್ನೆಲೆಯಲ್ಲಿ ಕಟ್ಟಡ ನೆಲಸಮಗೊಳಿಸಲು ಸ್ಥಳೀಯರು ಅಡ್ಡಿಪಡಿಸಿದ್ದಾರೆ.

ಅವಶೇಷಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಇನ್ನೂ ಮುಂದುವರೆದಿದೆ.ರಾಯಚೂರಿನ ನಿವಾಸಿ ನಾಗಮ್ಮ ತಮ್ಮ ಮೂವರು ಮಕ್ಕಳೊಂದಿಗೆ ಬೆಂಗಳೂರಿಗೆ ಕಟ್ಟಡ ಕೆಲಸದ ಸಲುವಾಗಿ ಬಂದಿದ್ದಾಗ ಇಂತಹ ದುರಂತ ಸಂಭವಿಸಿದೆ.

ವೆಬ್ದುನಿಯಾವನ್ನು ಓದಿ