ಕನಕಪುರದಲ್ಲಿ ಅಕ್ರಮ ಕಲ್ಲುಗಣಿಗಾರಿಕೆಯಿಂದ ಸಂಪತ್ತು ಲೂಟಿ: ಹಿರೇಮಠ್ ಆರೋಪ

ಬುಧವಾರ, 5 ಫೆಬ್ರವರಿ 2014 (17:07 IST)
PR
PR
ಬಳ್ಳಾರಿ: ಡಿಕೆಶಿ ಮತ್ತು ರಮೇಶ್ ಕುಮಾರ್ ಅವರನ್ನು ಸರ್ಕಾರ ರಕ್ಷಿಸುವ ಯತ್ನ ಮಾಡಿದೆ ಸಮಾಜಪರಿವರ್ತನೆ ಸಂಘಟನೆಯ ಮುಖ್ಯಸ್ಥ ಎಸ್.ಆರ್. ಹಿರೇಮಠ್ ಇಂದು ಸರ್ಕಾರದ ವಿರುದ್ದ ಗಂಭೀರ ಆರೋಪ ಮಾಡಿದರು. ಡಿ.ಕೆ. ಶಿವಕುಮಾರ್ ಮತ್ತು ಡಿ.ಕೆ.ಸುರೇಶ್ ಕನಕಪುರದಲ್ಲಿ ಅಕ್ರಮ ಗಣಿಗಾರಿಕೆ ನಡೆಸ್ತಿದ್ದಾರೆ. ಯಾವ ರೀತಿ ರಿಪಬ್ಲಿಕ್ ಆಫ್ ಬಳ್ಳಾರಿ ನಮ್ಮ ಖನಿಜ ಸಂಪತ್ತನ್ನು ಲೂಟಿ ಮಾಡಿದೆಯೋ ಅದೇ ರೀತಿ ಶಿವಕುಮಾರ್ ಅವರು ಅಕ್ರಮ ಕಲ್ಲುಗಣಿಗಾರಿಕೆ ಮೂಲಕ ಕನಕಪುರದ ಸಂಪತ್ತನ್ನು ಲೂಟಿ ಮಾಡಿದ್ದಾರೆ ಎಂದು ಎಸ್.ಆರ್.ಹಿರೇಮಠ್ ಆರೋಪಿಸಿದ್ದಾರೆ.

2006ರಲ್ಲಿ ಡಾ. ಯು. ವಿ. ಸಿಂಗ್ ಅವರು ಸರ್ವೇ ವರದಿಯನ್ನು ಕೊಟ್ಟಿದ್ದರು. ನಂತರ ರಾಜಕೀಯ ಪಕ್ಷದ ಪ್ರಭಾವವೋ, ಹಣದ ಪ್ರಭಾವವೋ ಅದು ಮುಚ್ಚಿಹೋಯಿತು. ಅಷ್ಟರಲ್ಲಿ ಈ ಸರ್ಕಾರ ಬಂದಮೇಲೆ ಡಿಕೆಶಿ ಅಕ್ರಮ ಕಲ್ಲುಗಣಿಗಾರಿಕೆಗೆ ರಕ್ಷಣೆ ಕೊಡ್ತಿದೆ. ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿಯಿಂದ ಗಣಿ ಲೂಟಿ ಮಾದರಿಯಲ್ಲಿ ಕನಕಪುರದಲ್ಲಿ ಕಲ್ಲುಗಣಿಗಾರಿಕೆಯಿಂದ ಸಂಪತ್ತು ಲೂಟಿಯಾಗಿದೆ ಎಂದು ಹಿರೇಮಠ್ ಆರೋಪಿಸಿದರು.

PR
PR
ಶ್ರೀನಿವಾಸಪುರ ಶಾಸಕ ರಮೇಶ್ ಕುಮಾರ್ ವಿರುದ್ಧ ಕೂಡ ಹಿರೇಮಠ್ ಗಂಭೀರ ಆರೋಪ ಮಾಡಿದ್ದಾರೆ. ರಮೇಶ್ ಕುಮಾರ್ ಜಮೀನು ಕಬಳಿಕೆ ಮಾಡಿದ್ದಾರೆ. ಜಂಟಿ ಸರ್ವೆವರದಿ ಇನ್ನೂ ಪೂರ್ಣವಾಗಿಲ್ಲ. ಹೈಕೋರ್ಟ್ ಆದೇಶ ಆಧರಿಸಿ ಅರಣ್ಯ ಜಮೀನು ಒತ್ತುವರಿ ಕೇಸ್ ರದ್ದಾಗಿದೆ. ವಲಯ ಅರಣ್ಯ ಅದಿಕಾರಿಯೇ ಪ್ರಕರಣ ದಾಖಲಿಸಿದ್ದರು. ಜಂಟಿ ಸರ್ವೇ ಪೂರ್ಣಗಂಡಿಲ್ಲದಿದ್ದರೂ ಪ್ರಕರಣ ರದ್ದಾಗಿರುವ ಕ್ರಮಕ್ಕೆ ಹಿರೇಮಠ್ ಆಕ್ಷೇಪ ವ್ಯಕ್ತಪಡಿಸಿದರು.

ವೆಬ್ದುನಿಯಾವನ್ನು ಓದಿ