ಕನ್ನಡ ಚಿತ್ರನಟ, ರಂಗಭೂಮಿ ಕಲಾವಿದ ಸಿ.ಆರ್. ಸಿಂಹ ವಿಧಿವಶ

ಶುಕ್ರವಾರ, 28 ಫೆಬ್ರವರಿ 2014 (15:19 IST)
PR
PR
ಬೆಂಗಳೂರು: ತೀವ್ರ ಅನಾರೋಗ್ಯಕ್ಕೀಡಾಗಿದ್ದ ಹಿರಿಯ ನಟ, ರಂಗಕರ್ಮಿ ಸಿ.ಆರ್. ಸಿಂಹ(72) ಬೆಂಗಳೂರಿನ ಸೇವಾಕ್ಷೇತ್ರ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಪ್ರಾಸ್ಟೇಟ್ ಕ್ಯಾನ್ಸರ್‌ನಿಂದ ನರಳುತ್ತಿದ್ದ ಅವರು ಕಳೆದ ಒಂದು ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದು, ವಾರದಿಂದೀಚೆಗೆ ಅವರ ಆರೋಗ್ಯ ತೀವ್ರ ಬಿಗಡಾಯಿಸಿತ್ತು.ಸಿಂಹ ಅವರಿಗೆ ಕೃತಕ ಉಸಿರಾಟದ ವ್ಯವಸ್ಥೆಯನ್ನು ಅಳವಡಿಸಲಾಗಿತ್ತು. ತುಘಲಕ್ ಪಾತ್ರದಿಂದ ಅಭಿಮಾನಿಗಳ ಮನಸ್ಸನ್ನು ಗೆದ್ದ ಸಿಂಹ ಹಿರಿಯ ನಟ ಶ್ರೀನಾಥ್ ಅವರ ಸಹೋದರರಾಗಿದ್ದರು. ಟಿಪಿಕಲ್ ಕೈಲಾಸಂ ಸಿ.ಆರ್. ಸಿಂಹ ಅವರ ಪ್ರಸಿದ್ಧ ನಾಟಕ. ಸಂಸ್ಕಾರ, ಸಂಕಲ್ಪ, ಚಿತೆಗೂ ಚಿಂತೆ, ಬರ ಹೀಗೆ 150ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅವರು ನಟಿಸಿದ್ದರು.

1942 ಜೂನ್ 16ರಂದು ಜನಿಸಿದ ಸಿ.ಆರ್. ಸಿಂಹ ರಾಮನಗರ ಜಿಲ್ಲೆಯ ಚೆನ್ನಪಟ್ಟಣ ತಾಲೂಕಿನಲ್ಲಿ ಜನಿಸಿದರು. ಕನ್ನಡ ಚಿತ್ರಗಳಲ್ಲಿ ತಮ್ಮದೇ ರೀತಿಯ ಅಭಿನಯ ಶೈಲಿಯಿಂದ ಹೆಸರು ಮಾಡಿದ್ದ ಸಿ.ಆರ್. ಸಿಂಹ ಬೆಂಗಳೂರು ಬಸನಗುಡಿ ನ್ಯಾಷನಲ್ ಕಾಲೇಜು ವಿದ್ಯಾರ್ಥಿಯಾಗಿದ್ದರು.

ವೆಬ್ದುನಿಯಾವನ್ನು ಓದಿ