ಕರ್ನಾಟಕದ ಯಾವ ಕ್ಷೇತ್ರಗಳಲ್ಲಿ ಶೇಕಡಾವಾರು ಎಷ್ಟೆಷ್ಟು ಮತದಾನವಾಗಿದೆ?

ಗುರುವಾರ, 17 ಏಪ್ರಿಲ್ 2014 (17:20 IST)
PR
PR
ಬೆಂಗಳೂರು: ಈ ಬಾರಿ ಬೆಂಗಳೂರಿನ ವಿವಿಧ ಕ್ಷೇತ್ರಗಳಲ್ಲಿ ಅತಿ ಕಡಿಮೆ ಮತದಾನವಾಗಿದ್ದು, ಕಳೆದ ಬಾರಿಗಿಂತ ಈ ಬಾರಿ ಮತದಾನದ ಪ್ರಮಾಣ ಕಡಿಮೆಯಾಗುವ ಸಾಧ್ಯತೆಯಿದೆ. ಮತದಾನದ ಹಕ್ಕು ಚಲಾಯಿಸುವ ಬಗ್ಗೆ ಚುನಾವಣೆ ಆಯೋಗ ಸೇರಿದಂತೆ ವಿವಿಧ ಸಂಘ, ಸಂಸ್ಥೆಗಳು ಜಾಗೃತಿ ಮೂಡಿಸಿದ್ದರೂ ಕೂಡ ಮತದಾರರ ನಿರಾಸಕ್ತಿ ಮನೋಭಾವಕ್ಕೆ ಕಾರಣ ಕೇಳಿದಾಗ ಯಾವ ಪಕ್ಷದವರು ಬಂದರೂ ನಮಗೆ ಮಾಡುವುದು ಏನೂ ಇಲ್ಲ ಎಂಬ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ನಮ್ಮ ಊರಿಗೆ ಕುಡಿಯುವ ನೀರು, ರಸ್ತೆ ಮುಂತಾದ ಮೂಲಸೌಲಭ್ಯಗಳಿಲ್ಲದಿರುವುದರಿಂದ ಮತದಾನ ಮಾಡುವುದಕ್ಕೆ ನಿರಾಸಕ್ತಿ ತಾಳಿರುವುದಾಗಿ ತಿಳಿಸಿದ್ದಾರೆ. 5 ಗಂಟೆವರೆಗೆ ವಿವಿಧ ಕ್ಷೇತ್ರಗಳಲ್ಲಿ ನಡೆದ ಮತದಾನದ ಶೇಕಡಾವಾರು ಪ್ರಮಾಣ ಕೆಳಗಿನಂತಿದೆ: ಮೈಸೂರು ಶೇ. 53, ಹಾವೇರಿ ಶೇ. 49, ಧಾರವಾಡ ಶೇ. 50, ಮಂಡ್ಯ ಶೇ. 49, ಉ.ಕನ್ನಡ ಶೇ.44, ಬೆಳಗಾವಿ ಶೇ. 54, ತುಮಕೂರು ಶೇ. 52, ಶಿವಮೊಗ್ಗ ಶೇ. 55, ದ.ಕನ್ನಡ ಶೇ. 65, ಚಿತ್ರದುರ್ಗ ಶೇ. 38, ಬೀದರ್ ಶೇ. 50, ಬೆಂ. ಗ್ರಾಮಾಂತರ ಶೇ.38,

ಬಿಜಾಪುರ ಶೇ. 42, ಹಾಸನ ಶೇ.54, ಚಾಮರಾಜನಗರ ಶೇ. 55, ಕೊಪ್ಪಳ ಶೇ. 41, ಬೆಂ.ಉತ್ತರ ಶೇ. 36, ಬೆಂಗಳೂರು ಕೇಂದ್ರ ಶೇ.35, ಬೆಂ.ದಕ್ಷಿಣ ಶೇ. 36,
ಬೆಂ.ಗ್ರಾಮಾಂತರ ಶೇ. 38, ಬಳ್ಳಾರಿ ಶೇ. 59, ಬಾಗಲಕೋಟೆ ಶೇ.55, ಬಿಜಾಪುರ ಶೇ. 43, ಚಿತ್ರದುರ್ಗ ಶೇ.38, ಚಿಕ್ಕಬಳ್ಳಾಪುರ ಶೇ. 53, ರಾಯಚೂರು ಶೇ. 41 ಮತದಾನವಾಗಿದೆ.

ವೆಬ್ದುನಿಯಾವನ್ನು ಓದಿ