ಕರ್ನಾಟಕ ಮೂಲದವರಿಂದ ಗೋಲ್ಡ್ ಸ್ಮಗ್ಲಿಂಗ್: 90 ಕೆಜಿ ಚಿನ್ನ ವಶ

ಮಂಗಳವಾರ, 22 ಅಕ್ಟೋಬರ್ 2013 (17:56 IST)
PTI
ನಗರದ ವಿಮಾನ ನಿಲ್ದಾಣದಲ್ಲಿ ಚಿನ್ನವನ್ನು ಕಳ್ಳಸಾಗಾಣೆ ಮಾಡುತ್ತಿದ್ದ ಕರ್ನಾಟಕ ಮೂಲದ ಮೂವರನ್ನು ಬಂಧಿಸಿ 90 ಲಕ್ಷ ರೂಪಾಯಿ ಮೌಲ್ಯದ ಚಿನ್ನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಸಿಂಗಾಪೂರ್ ಮತ್ತು ಬ್ಯಾಂಕಾಕ್‌ ವಿಮಾನಗಳಿಂದ ನಗರದ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಆರೋಪಿಗಳಾದ ಸಲ್ಮಾನ್ ಹೈದರ್, ಹುಸೇನ್ ಅಲಿ ಮತ್ತು ಆತನ ಪತ್ನಿ ಅಮ್ದುಲ್ ಝಹಾರಾ ಎನ್ನುವವರಿಂದ ಒಂದು ಕೆಜಿ ಭಾರವಿರುವ ಮೂರು ಚಿನ್ನದ ಬಿಸ್ಕಿಟ್‌ಗಳನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಬೆಂಗಳೂರಿನಲ್ಲಿರುವ ವ್ಯಕ್ತಿಯೊಬ್ಬನಿಗೆ ಮೂರು ಚಿನ್ನದ ಬಿಸ್ಕಿಟ್‌ಗಳನ್ನು ನೀಡುವ ಒಪ್ಪಂದವಾಗಿತ್ತು. ತಾವೆಲ್ಲರೂ ಕರ್ನಾಟಕದ ವಾಸಿಗಳು ಎಂದು ಆರೋಪಿಗಳು ತಿಳಿಸಿರುವುದಾಗಿ ತನಿಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸಲ್ಮಾನ್ ಹೈದರ್ ನನ್ನ ಒಳಚಡ್ಡಿಯಲ್ಲಿ ಬಂಗಾರದ ಗಟ್ಟಿಯನ್ನು ಅಡಗಿಸಿಟ್ಟುಕೊಂಡಿದ್ದ, ಮಹಿಳಾ ಆರೋಪಿ ತನ್ನ ಸಲ್ವಾರ್ ಅಡಿಯಲ್ಲಿ ಚಿನ್ನವನ್ನು ಅಡಗಿಸಿಟ್ಟಿದ್ದಳು. ಮತ್ತೊಬ್ಬ ಆರೋಪಿ ಕೂಡಾ ತನ್ನ ಜಾಕೇಟ್‌ನಲ್ಲಿ ಚಿನ್ನದ ಗಟ್ಟಿಯನ್ನು ಅಡಗಿಸಿಟ್ಟುಕೊಂಡಿದ್ದ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ