ಕಳಪೆ ಕಾಮಗಾರಿ ಸುಳಿಯಲ್ಲಿ ಬಿಬಿಎಂಪಿ: ಆಯುಕ್ತರು, ಮೇಯರ್ ಏನ್ಮಾಡ್ತಿದ್ದಾರೆ?

ಶುಕ್ರವಾರ, 17 ಜನವರಿ 2014 (16:30 IST)
PR
PR
ಬೆಂಗಳೂರು: ಹಗರಣಗಳ ಸುಳಿಯಲ್ಲೇ ಸಿಲುಕಿ ದಿವಾಳಿ ಅಂಚಿಗೆ ತಲುಪಿರುವ ಬೆಂಗಳೂರು ಮಹಾಪಾಲಿಕೆ 2013-14ರಲ್ಲಿ 4393 ಕೋಟಿ ರೂ. ಕಾಮಗಾರಿಗೆ ಬಜೆಟ್‌ನಲ್ಲಿ ಮೀಸಲಿಟ್ಟಿದ್ದು, ಕೇವಲ 1333 ಕೋಟಿ ಕಾಮಗಾರಿ ಪೂರ್ಣಗೊಂಡಿದೆ. 2011-12ರಲ್ಲಿ 443 ಕಾಮಗಾರಿಗಳ ಪೈಕಿ 84 ಕಾಮಗಾರಿಗಳು ಪಾಸ್ ಅಂದರೆ ಗುಣಮಟ್ಟದ ಕಾಮಗಾರಿಗಳು ಮತ್ತು 359 ಕಳಪೆ ಕಾಮಗಾರಿಗಳು, 2012-13ರಲ್ಲಿ 193 ಕಾಮಗಾರಿಗಳ ಪೈಕಿ 162 ಕಳಪೆ ಕಾಮಗಾರಿ. 2013-14ರ ಸಾಲಿನಲ್ಲಿ ಒಟ್ಟು 157 ಕಾಮಗಾರಿಗಳ ಪೈಕಿ 155 ಕಳಪೆ ಕಾಮಗಾರಿಗಳಾಗಿವೆ. ಪಾಲಿಕೆ ಕಾಮಗಾರಿ ಗುಣಮಟ್ಟ ನಿಯಂತ್ರಣ ವಿಭಾಗ ಈ ವಿಷಯ ಬಹಿರಂಗ ಮಾಡಿದೆ. ಕಾಮಗಾರಿ ಹೆಸರಲ್ಲಿ ಕೋಟಿ ಕೋಟಿ ಹಣವನ್ನು ಬಿಬಿಎಂಪಿ ಅಧಿಕಾರಿಗಳು ಗುಳುಂ ಮಾಡಿದ್ದಾರೆ.

ಮೂರು ವರ್ಷಗಳಲ್ಲಿ ಬರೀ ಕಳಪೆ ಕಾಮಗಾರಿಗಳದ್ದೇ ಪಾರುಪತ್ಯ. ಹಗರಣಗಳ ಸುಳಿಯಲ್ಲಿ ಬಿಬಿಎಂಪಿ ವಿಲಿ ವಿಲಿ ಒದ್ದಾಡ್ತಿದೆ. ಕಳಪೆ ಕಾಮಗಾರಿಗಳ ಆರೋಪ ಕೇಳಿಬಂದರೂ ಎಷ್ಟು ಜನರ ಮೇಲೆ ಬಿಬಿಎಂಪಿ ಕ್ರಮ ಕೈಗೊಂಡಿದೆ ಎನ್ನುವುದೇ ಪ್ರಶ್ನಾರ್ಹವಾಗಿದೆ.

ವೆಬ್ದುನಿಯಾವನ್ನು ಓದಿ