ಕಾಂಗ್ರೆಸ್ ಕಾರ್ಯಕಾರಿಣಿಯಲ್ಲಿ ಭಿನ್ನಮತ ಸ್ಫೋಟವಾಗುವ ಸಾಧ್ಯತೆ

ಶುಕ್ರವಾರ, 18 ಅಕ್ಟೋಬರ್ 2013 (21:26 IST)
PR
PR
ಬೆಂಗಳೂರು : ನಾಳೆ ಕಾಂಗ್ರೆಸ್ ಕಾರ್ಯಕಾರಿಣಿ ಸಭೆ ನಡೆಯಲಿದ್ದು, ಸಿಎಂ ವಿರುದ್ಧ ಒಂದು ರೀತಿಯಲ್ಲಿ ಚಾರ್ಜ್‌ಷೀಟ್ ರೆಡಿಯಾಗಿದೆ ಎಂದು ಹೇಳಬಹುದು.ಕಾಂಗ್ರೆಸ್ ಪಾಳೆಯದಲ್ಲಿ ಪರಮೇಶ್ವರ್ ಬಣ ಮತ್ತು ಸಿದ್ದರಾಮಯ್ಯ ಬಣ ಎಂಬ ಎರಡು ಬಣಗಳು ರೂಪುಗೊಂಡಿದೆಯೆಂದು ಹೇಳಲಾಗುತ್ತಿದೆ. ಸಿದ್ದರಾಮಯ್ಯ ಮತ್ತು ಪರಮೇಶ್ವರ್ ಬಣ ಮಾತ್ರವಲ್ಲದೇ ಇನ್ನೂ ಕೆಲವರು ತಮ್ಮ ಅಳಲು ತೋಡಿಕೊಳ್ಳಲು ಸಿದ್ಧವಾಗಿದ್ದಾರೆ. ಪಕ್ಷದ ಕಾರ್ಯಕಾರಿಣಿ ಸಭೆ ಸುಸೂತ್ರವಾಗಿ ನಡೆದರೆ ಅದಕ್ಕಿಂತ ಅಚ್ಚರಿ ಬೇರೊಂದಿಲ್ಲವೆಂದು ಹೇಳಲಾಗುತ್ತಿದೆ.

ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಈ ಸಭೆಯಲ್ಲಿ ಪಾಲ್ಗೊಳ್ಳಬಹುದೆಂದು ಹೇಳಲಾಗುತ್ತಿದೆ. ಸಿದ್ದರಾಮಯ್ಯ ಅವರ ಕಾರ್ಯವೈಖರಿ ಕೆಲವು ಶಾಸಕರಲ್ಲಿ ಅಸಮಾಧಾನ ಮೂಡಿಸಿದೆಯೆಂದು ಹೇಳಲಾಗುತ್ತಿದೆ. ಈ ಶಾಸಕರ ಪರವಾಗಿ ಕಾರ್ಯಕಾರಣಿಯಲ್ಲಿ ಧ್ವನಿ ಏಳಬಹುದೆಂದು ಭಾವಿಸಲಾಗಿದೆ. ಸಿದ್ದರಾಮಯ್ಯ ಅವರು ನಮ್ಮ ಪಕ್ಷದಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯವಿಲ್ಲ. ಎಲ್ಲವೂ ಸುಸೂತ್ರವಾಗಿದೆ ಎಂದು ಹೇಳಿದ್ದಾರೆ.. ಆದರೆ ಬೂದಿ ಮುಚ್ಚಿದ ಕೆಂಡದಂತಿರುವ ಭಿನ್ನಮತ ನಾಳಿನ ಕಾರ್ಯಕಾರಿಣಿ ಸಭೆಯಲ್ಲಿ ಸ್ಫೋಟಗೊಳ್ಳುವ ಲಕ್ಷಣಗಳು ಕಂಡುಬಂದಿವೆ.

ವೆಬ್ದುನಿಯಾವನ್ನು ಓದಿ