ಕಾಂಗ್ರೆಸ್ ನಿವೇಶನ ಸ್ವಂತಕ್ಕೆ ಬಳಕೆ: ಕೊಂಡಯ್ಯಗೆ ನೋಟಿಸ್

ಮಂಗಳವಾರ, 26 ನವೆಂಬರ್ 2013 (15:35 IST)
PR
PR
ಬೆಂಗಳೂರು: ಕಾಂಗ್ರೆಸ್ ಮುಖಂಡ ಕೊಂಡಯ್ಯ ಅವರಿಗೆ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ನೋಟಿಸ್ ನೀಡಿದ್ದಾರೆ. ಕೆ.ಸಿ. ಕೊಂಡಯ್ಯ ಕಾಂಗ್ರೆಸ್ ಕಚೇರಿಗೆ ಮೀಸಲಾಗಿದ್ದ ನಿವೇಶನವನ್ನು ಸ್ವಂತಕ್ಕೆ ಬಳಸಿಕೊಂಡಿದ್ದಾರೆಂದು ಆರೋಪಿಸಲಾಗಿದ್ದು, ಒಂದು ವಾರದಲ್ಲಿ ಉತ್ತರಿಸುವಂತೆ ನೋಟಿಸ್‌ನಲ್ಲಿ ತಿಳಿಸಲಾಗಿದೆ. ಕೊಂಡಯ್ಯ ಕುಟುಂಬದ ಹೆಸರಿನಲ್ಲಿ ನಿವೇಶನವನ್ನು ನೋಂದಣಿ ಮಾಡಿಸಿದ್ದಾರೆಂದು ಹೇಳಲಾಗಿದೆ. ನೋಟಿಸ್ ನೀಡುವಂತೆ ರಾಹುಲ್ ಗಾಂಧಿ ಸೂಚನೆಯನ್ನು ಕೂಡ ನೀಡಿದ್ದರಿಂದ ಈ ನೋಟಿಸ್ ನೀಡಲಾಗಿದೆಯೆಂದು ಹೇಳಲಾಗಿದೆ.

ಕೊಂಡಯ್ಯ ಅವರ ಮೇಲಿನ ಆರೋಪಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಕಳೆದ ಶುಕ್ರವಾರ ಕೆಪಿಸಿಸಿಗೆ ತನಿಖಾ ವರದಿ ಸಲ್ಲಿಸಿತ್ತು. ಪ್ರಾಥಮಿಕ ತನಿಖಾ ವರದಿಯಲ್ಲಿ ಕೊಂಡಯ್ಯ ವಿರುದ್ಧದ ಆರೋಪ ಸಾಬೀತಾಗಿದೆ. ಹೈಕಮಾಂಡ್ ನಾಯಕರಿಗೆ ಪರಿಶೀಲನೆಗಾಗಿ ವರದಿ ಪ್ರತಿಯನ್ನು ಕಳಿಸಲಾಗಿದೆ ಎಂದು ಜಿ ಪರಮೇಶ್ವರ್ ಹೇಳಿದ್ದರು.

ತನಿಖಾ ವರದಿ ಪರಿಶೀಲಿಸಿದ ರಾಹುಲ್ ಗಾಂಧಿ ಅವರು ಶಿಸ್ತು ಕ್ರಮ ಕೈಗೊಳದೆ ವಿಳಂಬವಾಗಿರುವುದಕ್ಕೆ ಬೇಸರ ವ್ಯಕ್ತಪಡಿಸಿ ಕೂಡಲೇ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿ ಪರಮೇಶ್ವರ್ ಅವರಿಗೆ ಸೂಚನೆ ಕಳಿಸಿದ್ದಾರೆ ಎಂದು ವರದಿ ಬಂದಿತ್ತು.

ವೆಬ್ದುನಿಯಾವನ್ನು ಓದಿ