ಕಾಂಗ್ರೆಸ್ ಪಕ್ಷದಿಂದ ತೀವ್ರ ಅವಮಾನ: ಜಾಫರ್ ಷರೀಫ್ ಆರೋಪ

ಬುಧವಾರ, 16 ಏಪ್ರಿಲ್ 2014 (19:14 IST)
PR
PR
ಬೆಂಗಳೂರು:ಕಾಂಗ್ರೆಸ್ ಪಕ್ಷದಿಂದ ತೀವ್ರ ಅವಮಾನವಾಗಿದ್ದು, ಪಕ್ಷದಿಂದ ಹೊರಗುಳಿಯುವುದಾಗಿ ಹಿರಿಯ ಕಾಂಗ್ರೆಸ್ ಮುಖಂಡ ಜಾಫರ್ ಷರೀಫ್ ಹೇಳಿದ್ದಾರೆ. ತಮ್ಮ ಇಂದಿನ ಸ್ಥಿತಿಗೆ ಕಾಂಗ್ರೆಸ್ ಸರ್ಕಾರವೇ ಕಾರಣವೆಂದು ನೇರವಾಗಿ ವಾಗ್ದಾಳಿ ಮಾಡಿದರು. ಸಿದ್ದರಾಮಯ್ಯ ಅವರ ಶಕ್ತಿ ಮತ್ತು ಇತಿಮಿತಿಗಳು ಗೊತ್ತಿರುವುದರಿಂದ ಸಿದ್ದರಾಮಯ್ಯ ವಿರುದ್ದ ತಾವು ದೂರುವುದಿಲ್ಲ ಎಂದು ಜಾಫರ್ ಷರೀಫ್ ತಿಳಿಸಿದರು. ದೇವೇಗೌಡರಿಗೆ ತಮ್ಮ ಬೆಂಬಲವಿದ್ದರೂ ತಾವು ಜೆಡಿಎಸ್ ಪಕ್ಷವನ್ನು ಸೇರುವುದಿಲ್ಲ ಎಂದು ಜಾಫರ್ ಷರೀಫ್ ಹೇಳಿದರು. ತಾವು ಬರೆಯುವ ಆತ್ಮಕಥೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿನ ತಮ್ಮ ಅನುಭವಗಳನ್ನು ಬಿಚ್ಚಿಡುವುದಾಗಿ ಜಾಫರ್ ಷರೀಫ್ ಹೇಳಿದರು.

ಜಾಫರ್‌ ಷರೀಫ್ ಅವರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನಿರಾಕರಿಸಿ ರಿಜ್ವಾನ್ ಅವರಿಗೆ ನೀಡಿದ್ದರಿಂದ ಷರೀಫ್ ತೀವ್ರ ಬೇಸರಗೊಂಡಿದ್ದರು. ಷರೀಫ್ ಜೆಡಿಎಸ್ ಮುಖಂಡ ದೇವೇಗೌಡರನ್ನು ಭೇಟಿ ಮಾಡಿ ಪಕ್ಷಕ್ಕೆ ಸೇರುವ ಬಗ್ಗೆ ಮಾತುಕತೆ ನಡೆಸಿದ್ದರು. ನಂತರ ಮೆಕ್ಕಾಯಾತ್ರೆಗೆ ತೆರಳಿದ ಬಳಿಕ ಜೆಡಿಎಸ್‌ಗೆ ಸೇರುವ ಬಗ್ಗೆ ಮನಸ್ಸು ಬದಲಾಯಿಸಿದ್ದರು.

ವೆಬ್ದುನಿಯಾವನ್ನು ಓದಿ