ಕೆ.ಆರ್. ಮಾರುಕಟ್ಟೆಯನ್ನುಲ್ಲಿ ಪೊರಕೆ ಹಿಡಿದು ಸ್ವಚ್ಛತಾ ಆಂದೋಲನ

ಸೋಮವಾರ, 16 ಸೆಪ್ಟಂಬರ್ 2013 (13:36 IST)
PR
PR
ಬೆಂಗಳೂರು: ಸದಾ ಗಬ್ಬು ನಾರುವ , ಗಲೀಜು, ಕಸದಿಂದ ತುಂಬಿದ ಕೆ.ಆರ್. ಮಾರುಕಟ್ಟೆಯಲ್ಲಿ ಸೋಮವಾರ ಬೆಂಗಳೂರಿನ ಮೇಯರ್ ಕಟ್ಟೆ ಸತ್ಯನಾರಾಯಣ ಮತ್ತು ಕಾಲೇಜಿನ ವಿದ್ಯಾರ್ಥಿಗಳು ಪೊರಕೆ ಹಿಡಿದು ಸ್ವಚ್ಛತಾ ಆಂದೋಲನವನ್ನು ಷುರುಮಾಡಿದರು. ಮಾರುಕಟ್ಟೆಯಲ್ಲಿ ಗಲೀಜಿನಿಂದ ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿಯಿದೆ. ಈ ಕುರಿತು ಅನೇಕ ದೂರುಗಳು ಬಂದ ಹಿನ್ನೆಲೆಯಲ್ಲಿ ಮೇಯರ್ ಕಟ್ಟೆ ಸತ್ಯನಾರಾಯಣ ಪೊರಕೆ ಹಿಡಿದು ಸ್ವಚ್ಛತಾ ಆಂದೋಲನ ಆರಂಭಿಸಿದರು. ಆದರೆ ಕಾಟಾಚಾರಕ್ಕೆ ವಾರಕ್ಕೊಮ್ಮೆ ಸ್ವಚ್ಛತಾ ಆಂದೋಲನ ಆರಂಭಿಸಿದರೆ ಕೆ.ಆರ್. ಮಾರುಕಟ್ಟೆ ಸ್ವಚ್ಛವಾಗುತ್ತದೆಯೇ ಎಂಬ ಪ್ರಶ್ನೆ ಮೂಡಿದೆ.

ಏಕೆಂದರೆ ಕೆ.ಆರ್. ಮಾರುಕಟ್ಟೆ ಸ್ವಚ್ಛತೆಗೆ ಒಂದು ತಿಂಗಳು ಸಮಯವಾದ್ರೂ ಬೇಕು. ಇದೇ ಸಂದರ್ಭದಲ್ಲಿ ಬಿಬಿಎಂಪಿ ಆವರಣ ಹೇಗಿತ್ತು ಎಂದು ನೋಡಿದಾಗ ಅಲ್ಲಿ ಕಂಡಿದ್ದು, ಬರೀ ಗಲೀಜು, ಸಾರಾಯಿ ಬಾಟಲುಗಳು ಮತ್ತು ಕಸಕಡ್ಡಿಗಳು.

ವೆಬ್ದುನಿಯಾವನ್ನು ಓದಿ