ಕೊಡಗಿನ ವೀರ ಜ. ಕಾರ್ಯಪ್ಪ 115ನೇ ಜನ್ಮದಿನ: ಸಮಾಧಿಗೆ ಗೌರವ

ಮಂಗಳವಾರ, 28 ಜನವರಿ 2014 (20:06 IST)
PR
PR
ಬೆಂಗಳೂರು:ಇಂದು ಕೊಡಗಿನ ವೀರ ಜನರಲ್ ಕಾರ್ಯಪ್ಪ ಅವರ 115ನೇ ಜನ್ಮದಿನದ ನಿಮಿತ್ತ ಅವರ ಸಮಾಧಿಗೆ ತೆರಳಿ ಪುಷ್ಪಗುಚ್ಛ ಅರ್ಪಿಸಿ ಗೌರವ ಸಲ್ಲಿಸಲಾಯಿತು. ದೇಶದ ಮೊಟ್ಟ ಮೊದಲ ದಂಡನಾಯಕ ಕೆ.ಎಂ. ಕಾರ್ಯಪ್ಪ. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರು ಸೋಮವಾರ ಪೇಟೆ ತಾಲೂಕಿನಲ್ಲಿ ಜನಿಸಿದರು. 1899ರ ಜನವರಿ 28ರಂದು ಜನಿಸಿದರು. ಬ್ರಿಟಿಷರ ಕಾಲದಲ್ಲಿ ಕಂದಾಯ ಅಧಿಕಾರಿಯಾಗಿದ್ದ ಕಾರ್ಯಪ್ಪ ಅವರ ತಂದೆ ಮಾದಪ್ಪ ಅವರ ವರ್ಚಸ್ಸು ಇವರ ವ್ಯಾಸಂಗಕ್ಕೆ ಅನುಕೂಲವಾಯಿತು. ಅವರು ಅಪ್ಪನ ಪಾಲಿಗೆ ಮುದ್ದಿನ ಚಿಮ್ಮಾ ಎಂದೇ ಹೆಸರಾಗಿದ್ದರು. ಕೊಡವ ಸಂಪ್ರದಾಯದ ದಿರಿಸು ತೊಡುವುದು ಮತ್ತು ಸಾಂಪ್ರದಾಯಿಕ ನೃತ್ಯ ಮಾಡುವುದು ಅವರಿಗೆ ಸಂತಸದ ವಿಚಾರವಾಗಿತ್ತು.

PR
PR
1918ರಲ್ಲಿ ಕೊಡಗಿನ ವೀರ ಸೇನೆಗೆ ಧುಮುಕಿದ್ದರು. ಶಿಸ್ತಿಗೆ ಹೆಸರುವಾಸಿಯಾದ ಕಾರ್ಯಪ್ಪ ಇವತ್ತಿಗೂ ಈ ನೆಲದ ಮಕ್ಕಳಿಗೆ ಸೈನ್ಯಸ್ಫೂರ್ತಿ ಕೊಟ್ಟಿದ್ದಾರೆ. ಕಾರ್ಯಪ್ಪ ನಿವೃತ್ತಿ ನಂತರ ಮಡಿಕೇರಿಯಲ್ಲಿ ವಾಸ ಮಾಡುತ್ತಿದ್ದರು. 1963ರವರೆಗೆ ಸೇನಾಪಡೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಅವರ ಆಯಸ್ಸಿನ ಗುಟ್ಟು ವ್ಯಾಯಾಮ ಮತ್ತು ವಾಕಿಂಗ್.

ವೆಬ್ದುನಿಯಾವನ್ನು ಓದಿ