ಕೋಟಿವೀರ ಸಹೋದರರಿಗೆ ಲೋಕಾಯುಕ್ತ ದಾಳಿಯ ಶಾಕ್

ಶುಕ್ರವಾರ, 27 ಡಿಸೆಂಬರ್ 2013 (18:31 IST)
PR
PR
ಗದಗ: ಲೋಕಾಯುಕ್ತ ಅಧಿಕಾರಿಗಳು ಶುಕ್ರವಾರ ಬೆಳ್ಳಂಬೆಳಗ್ಗೆ ಹೆಸ್ಕಾಂ ಜಾಗೃತದಳದ ಇನ್ಸ್‌ಪೆಕ್ಟರ್ ಗದಗದ ಕರಿಬಸವನಗೌಡರ ಮನೆ ಮೇಲೆ ದಾಳಿ ಮಾಡಿ ದಾಖಲೆಗಳ ತಪಾಸಣೆ ನಡೆಸಿದರು ಮತ್ತು ಅಕ್ರಮ ಆಸ್ತಿಪಾಸ್ತಿ ಪತ್ತೆಹಚ್ಚಿದರು. ಅವರ ಮಾವನ ಮನೆ ಮೇಲೂ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅವರ ಸಹೋದರ ವಿಶ್ವನಾಥ ಗೌಡರ ವಿರುದ್ಧ ಕೂಡ ಅಕ್ರಮ ಆಸ್ತಿ ಗಳಿಕೆ ದೂರು ದಾಖಲಾಗಿದ್ದ ಹಿನ್ನೆಲೆಯಲ್ಲಿ ಬಾದಾಮಿಯಲ್ಲಿರುವ ಅವರ ಮನೆ, ಕಚೇರಿ, ಮಾವ ವೀರಪ್ಪ ಅವರ ಹರಪನಹಳ್ಳಿಯ ಮನೆಗಳ ಮೇಲೆ ಏಕಕಾಲಕ್ಕೆ ಲೋಕಾ ಅಧಿಕಾರಿಗಳು ದಾಳಿ ಮಾಡಿ ಅಕ್ರಮ ಆಸ್ತಿ ಪತ್ತೆ ಹಚ್ಚಿದ್ದಾರೆ.

ಹೆಸ್ಕಾಂ ಜಾಗೃತ ದಳದ ಇನ್ಸ್‌ಪೆಕ್ಟರ್ ಕರಿಬಸವನಗೌಡ 2 ವರ್ಷಗಳ ಹಿಂದೆ ಲೋಕಾಯುಕ್ತ ಇನ್ಸ್‌ಪೆಕ್ಟರ್ ಆಗಿದ್ದರು. ಕರಿಬಸವನಗೌಡ ರ ಆದಾಯದಲ್ಲಿ ಒಟ್ಟು ಗಳಿಕೆ 43 ಲಕ್ಷ.ರೂ. ಆದರೆ ಅವರಿಗೆ 5 ಕೋಟಿ ರೂ. ಆಸ್ತಿ ಬಂದಿದ್ದು ಹೇಗೆನ್ನುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ವಿಶ್ವನಾಥ ಗೌಡ ಆಹಾರ ನಿರೀಕ್ಷಕರಾಗಿದ್ದಾರೆ.

ವೆಬ್ದುನಿಯಾವನ್ನು ಓದಿ