ಕೋಳಿಗಳಿಗೆ ರಾಣಿಕೇತ್‌: ಸಾವಿರಾರು ಕೋಳಿಗಳ ಮಾರಣಹೋಮ

ಶುಕ್ರವಾರ, 31 ಜನವರಿ 2014 (17:08 IST)
PR
PR
ಮೈಸೂರು: ಹಕ್ಕಿ ಜ್ವರ ಆಯ್ತು, ಈಗ ಮೈಸೂರಿನಲ್ಲಿ ಕೋಳಿಗಳಿಗೆ ಕೊಕ್ಕರೆ ರೋಗ ಷುರುವಾಗಿದ್ದು, ಕೋಳಿಗಳ ಮಾರಣಹೋಮ ನಡೆಯುತ್ತಿದೆ. ಸತ್ತಕೋಳಿಗಳನ್ನು ಕೋಳಿಫಾರಂ ಮಾಲೀಕರು ಹೂಳುತ್ತಿದ್ದಾರೆ. ರೋಗ ಹರಡದಂತೆ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಇದರಿಂದ ಮೈಸೂರಿನ ಕೋಳಿಪ್ರಿಯರಿಗೆ ಆತಂಕವಾಗಿದೆ. ರಾಣಿಕೇತ್ ಎಂಬ ರೋಗ ಮೈಸೂರು ಜಿಲ್ಲೆಯಲ್ಲಿ ಕಾಣಿಸಿಕೊಂಡಿದ್ದು, ಕೋಳಿಫಾರಂಗಳಲ್ಲಿ ಸಾವಿರಾರು ಕೋಳಿಗಳು ಸಾವನ್ನಪ್ಪಿವೆ. ಸತ್ತ ಕೋಳಿಗಳನ್ನು ಲಾರಿಗಳಲ್ಲಿ ತುಂಬಿಕೊಂಡು ಮಣ್ಣು ಮಾಡಲಾಗುತ್ತಿದೆ.

ಸತ್ತ ಕೋಳಿಗಳ ಸ್ಯಾಂಪಲ್ ಸಂಗ್ರಹಿಸಿ ಲ್ಯಾಬ್‌ಗೆ ಪರೀಕ್ಷೆಗಾಗಿ ಕಳಿಸಲಾಗುತ್ತಿದೆ. ಕಳೆದ ಒಂದು ವಾರದಿಂದ ರೋಗದ ತೀವ್ರತೆ ಕಂಡುಬಂದಿದೆ. ಉತ್ತರಪ್ರದೇಶದ ರಾಣಿಕೇತ್ ಎಂಬ ಗ್ರಾಮದಲ್ಲಿ ಮೊದಲಿಗೆ ಈ ರೋಗ ಕಂಡುಬಂದಿದ್ದರಿಂದ ಆ ಹೆಸರು ಬಂದಿದೆ.

ವೆಬ್ದುನಿಯಾವನ್ನು ಓದಿ