ಗಡ್ಕರಿಗೆ ಯಡಿಯೂರಪ್ಪನವರನ್ನು ಬಿಜೆಪಿ ಕರೆತರುವ ಆಸೆ

ಶನಿವಾರ, 23 ನವೆಂಬರ್ 2013 (16:38 IST)
PR
PR
ಬೆಂಗಳೂರು: ಕಾಂಗ್ರೆಸ್ ವಿರೋಧಿ ರಾಜಕೀಯ ಪಕ್ಷಗಳನ್ನು ಒಗ್ಗೂಡಿಸಿ ಎನ್‌ಡಿಎಗೆ ಸೆಳೆಯಲು ಬಿಜೆಪಿ ಪ್ರಯತ್ನಿಸುತ್ತಿದ್ದು, ರಾಜ್ಯದಲ್ಲಿ ಬಿಎಸ್‌ವೈಯವರನ್ನು ಪಕ್ಷಕ್ಕೆ ಕರೆತಂದರೆ ಒಳ್ಳೆಯದು ಎಂದು ನಿತಿನ್ ಗಡ್ಕರಿ ಹೇಳಿಕೆ ನೀಡಿದ್ದಾರೆ. ಸೂಕ್ತ ಕಾಲದಲ್ಲಿ ಯಡಿಯೂರಪ್ಪ ಜತೆ ಮಾತನಾಡಿ ಅವರನ್ನು ಪಕ್ಷಕ್ಕೆ ಕರೆತರುವುದಾಗಿ ಗಡ್ಕರಿ ಹೇಳಿದರು. ಕಾಂಗ್ರೆಸ್ ವಿರೋಧಿ ಶಕ್ತಿಗಳನ್ನು ಒಗ್ಗೂಡಿಸಲು ಯಡಿಯೂರಪ್ಪ ಬೇಕು ಎಂದು ಗಡ್ಕರಿ ಹೇಳಿದರು. ತಾವು ಈ ಕುರಿತು ಹಿರಿಯ ನಾಯಕರ ಜತೆ ಮಾತನಾಡಿ ಯಡಿಯೂರಪ್ಪ ಎನ್‌ಡಿಎಗೆ ಸೇರಲು ವೇದಿಕೆ ನಿರ್ಮಿಸುವುದಾಗಿ ಅವರು ನುಡಿದರು. ಆದರೆ ಬಿಜೆಪಿ ಪಕ್ಷಕ್ಕೆ ಮತ್ತೆ ಸೇರುವ ಬಗ್ಗೆ ಯಡಿಯೂರಪ್ಪ ಈಗಾಗಲೇ ಅಸಮ್ಮತಿ ಸೂಚಿಸಿದ್ದಾರೆ.

ಎನ್‌ಡಿಎ ಜತೆ ಲೋಕಸಭೆ ಚುನಾವಣೆಯಲ್ಲಿ ಸೀಟು ಹೊಂದಾಣಿಕೆಗೆ ಯಡಿಯೂರಪ್ಪ ಸಿದ್ಧವಾಗಿದ್ದರು. ಆದರೆ ನರೇಂದ್ರ ಮೋದಿ ಬೆಂಗಳೂರಿಗೆ ಬಂದು ಹೋದ ಮೇಲೆ ಯಡಿಯೂರಪ್ಪ ಎಲ್ಲ 28 ಸೀಟುಗಳಿಗೆ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ನಿಲ್ಲಿಸುವುದಾಗಿ ಹೇಳಿದ್ದರು. ಬಹುಶಃ ಮೋದಿ ಅವರು ಯಡಿಯೂರಪ್ಪನ ಹೆಸರನ್ನು ಭಾಷಣದಲ್ಲಿ ಪ್ರಸ್ತಾಪಿಸದಿರುವುದು ಅವರಿಗೆ ಸಿಟ್ಟು ತರಿಸಿರಬಹುದು.

ವೆಬ್ದುನಿಯಾವನ್ನು ಓದಿ