ಗ್ರಾಮ ಪಂಚಾಯಿತಿ ಉಪ ಚುನಾವಣೆ ಅಗಸ್ಟ್ 4 ಕ್ಕೆ

ಗುರುವಾರ, 18 ಜುಲೈ 2013 (16:59 IST)
PR
PR
ಅಗಸ್ಟ್ 4 ರಂದು ಗ್ರಾಮ ಪಂಚಾಯಿತಿ ಉಪ ಚುನಾವಣೆಗಳು ನಡೆಯಲಿವೆ . ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇದೆ ಮೊದಲ ಉಪ ಚುನಾವಣೆ ಇದಾಗಿದೆ . ತೀವ್ರ ಕುತೂಹಲ ಕೆರಳಿಸಿದ ಈ ಚುನಾವಣೆ ಕಾಂಗ್ರೆಸ್ ಸರಕಾರಕ್ಕೆ ಸವಾಲಾಗಿದೆ . ರಾಜಿನಾಮೆ, ನಿಧನ ಸಹಿತ ವಿವಿಧ ಕಾರಣಕ್ಕೆ ತೆರವಾಗಿರುವ 489 ಗ್ರಾಮ ಪಂಚಾಯ್ತಿಗಳ 560 ಸ್ಥಾನಗಳಿಗೆ ನಡೆಯಬೇಕಾಗಿದ್ದ ಚುನಾವಣೆಗೆ ರಾಜ್ಯ ಚುನಾವಣಾ ಆಯೋಗ ಮುಹೂರ್ತ ಫಿಕ್ಸ್ ಮಾಡಿದ್ದು, ಆಗಸ್ಟ್ 4ರಂದು ಚುನಾವಣೆ ನಡೆಯಲಿದೆ.

ಇಂದಿನಿಂದಲೇ ರಾಜ್ಯದಲ್ಲಿ ನೀತಿಸಂಹಿತೆ ಜಾರಿಗೆ ಬರಲಿದೆ ಎಂದು ಚುನಾವಣೆ ಆಯೋಗ ತಿಳಿಸಿದೆ. ನಾಮಪತ್ರ ಸಲ್ಲಿಕೆಗೆ ಜುಲೈ 24 ಕಡೆಯ ದಿನವಾಗಿದೆ. ಇನ್ನು ಜುಲೈ 26ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಜು.27 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಅಧಿಸೂಚನೆ ಜಾರಿಗೆ ಬರುತ್ತಲೇ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆ ಗಳು ನಡೆಯುತ್ತಿವೆ ಜೊತೆಗೆ ಎಲ್ಲ ಪಕ್ಷಗಳು ಈ ಚುನಾವಣೆಗೆ ಸಿದ್ದತೆ ನಡೆಸಿವೆ .

ಅಗಸ್ಟ್ ನಾಲ್ಕರಂದು ಚುನಾವಣೆ ನಡೆಯಲಿದೆ ಬೆಳ್ಳಿಗೆ ಬೆಳಗ್ಗೆ 7 ರಿಂದ ಸಂಜೆ 5ರವರೆಗೆ ಮತದಾನ ನಡೆಯಲಿದ್ದು , ಅಗಸ್ಟ್ 7 ರಂದೇ ಫಾಲಿತಂಶ ಇದೆ . ಆಯ ತಾಲೂಕು ಕೇಂದ್ರಗಳಲ್ಲಿ ಮತದಾನದ ಎಣಿಕೆ ಕಾರ್ಯ ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ವೆಬ್ದುನಿಯಾವನ್ನು ಓದಿ