ಚಪ್ಪಲಿ ಎಸೆತ-ಘಟನೆ ಹಿಂದೆ ದೇವೇಗೌಡರ ಕೈ: ಯಡಿಯೂರಪ್ಪ

ಮಂಗಳವಾರ, 28 ಏಪ್ರಿಲ್ 2009 (20:33 IST)
NRB
ಬಿಜೆಪಿ ಪ್ರಚಾರ ಸಭೆಯಲ್ಲಿ ವ್ಯಕ್ತಿಯೊಬ್ಬ ಚಪ್ಪಲಿ ಎಸೆಯುವ ಯತ್ನದ ಕೃತ್ಯದ ಹಿಂದೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಪುತ್ರರು ಹಾಗೂ ಬೆಂಬಲಿಗರ ಕೈವಾಡ ಇದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗಂಭೀರವಾಗಿ ಆರೋಪಿಸಿದ್ದಾರೆ.

ಬಹಿರಂಗ ಸಭೆಯಲ್ಲಿ ಈ ರೀತಿ ಮಾಡಿಸುವ ಮೂಲಕ ನನಗೆ ಅಪಮಾನ ಮಾಡಲಾಗಿದೆ. ಮುಂದೆ ಯಾರಿಗೂ ಈ ರೀತಿ ಆಗಬಾರದು ಎಂದಿರುವ ಮುಖ್ಯಮಂತ್ರಿಗಳು, ಆರೋಪಿಯನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ. ಆರೋಪಿ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು ಎಂದು ಹೊನ್ನಾಳಿಯಲ್ಲಿ ಸುದ್ದಿಗಾರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.

ಮಂಗಳವಾರ ಚನ್ನರಾಯಪಟ್ಟಣದಲ್ಲಿ ಬಿಜೆಪಿ ಸಮಾವೇಶದಲ್ಲಿ ಯಡಿಯೂರಪ್ಪನವರು ಮಾತನಾಡುತ್ತಿದ್ದ ವೇಳೆಯಲ್ಲಿ ಕೋಡಿಹಳ್ಳಿ ನಿವಾಸಿ ಚಂದ್ರಶೇಖರ್ ಎಂಬಾತ ಮುಖ್ಯಮಂತ್ರಿಗಳತ್ತ ಚಪ್ಪಲಿ ಎಸೆಯುವ ಯತ್ನ ನಡೆಸಿದ್ದ. ಘಟನೆಗೆ ಸಂಬಂಧಿಸಿದಂತೆ ಚಂದ್ರಶೇಖರ ಅವರನ್ನು ಬಂಧಿಸಲಾಗಿದೆ.

ಇದು ಒಳ್ಳೆಯ ಸಂಸ್ಕೃತಿ ಅಲ್ಲ-ದೇವೇಗೌಡ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮೇಲೆ ಚಪ್ಪಲಿ ಎಸೆಯಲು ಯತ್ನಿಸಿದ ಘಟನೆಯನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತೀವ್ರವಾಗಿ ಖಂಡಿಸಿದ್ದಾರೆ.

ಘಟನೆ ಕುರಿತಂತೆ ಅರಸೀಕರೆಯಲ್ಲಿ ಸುದ್ದಿಗಾರರೊಂದಿಗ ಮಾತನಾಡಿದ ಅವರು, ಇದು ಒಳ್ಳೆಯ ಸಂಸ್ಕೃತಿಲ್ಲ. ಆರೋಪಿ ಯಾರೇ ಆಗಿದ್ದರು ಕೂಡ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದು, ಈ ಘಟನೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಮಾನ ಎಂದು ಹೇಳಿದರು.

ಯಡಿಯೂರಪ್ಪ ಮೇಲೆ ಚಪ್ಪಲಿ ಎಸೆಯುವ ಯತ್ನ

ವೆಬ್ದುನಿಯಾವನ್ನು ಓದಿ