ಚಿಕ್ಕಮಗಳೂರಿನಲ್ಲಿ ಮಳೆ: ತತ್ತರಿಸಿದ ಜನಜೀವನ

ಶನಿವಾರ, 20 ಜುಲೈ 2013 (10:24 IST)
PR
PR
ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ ಕಳೆದ 48 ಗಂಟೆಗಳಿಂದ ಸುರಿಯುತ್ತಿರುವ ಭಾರಿ ಮಳೆಯ ಹಿನ್ನೆಲೆಯಲ್ಲಿ ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಜನಜೀವನ ತತ್ತರಿಸಿದೆ. ಶೃಂಗೇರಿಯಿಂದ ಮಂಡ್ಯಕ್ಕೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಮೇಲೆ ಬಾಳೆಹೊನ್ನೂರಿನ ಬಸ್ರವಳ್ಳಿ ಬಳಿ ಮರವೊಂದು ಉರುಳಿಬಿದ್ದ ಘಟನೆ ನಡೆದಿದೆ. ಮಳೆಯಿಂದಾಗಿ ಕಳಸ ಮತ್ತು ಹೊರನಾಡಿನ ಸಂಪರ್ಕ ಸ್ಥಗಿತಗೊಂಡಿದೆ.

ಕೊಡಗಿನಲ್ಲಿ ಕೂಡ ಭಾರಿ ಮಳೆ ಸುರಿಯುತ್ತಿದ್ದು, ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಕಾವೇರಿ ಮತ್ತು ಹೇಮಾವತಿ ನದಿಗಳು ಉಕ್ಕಿ ಹರಿಯುತ್ತಿದ್ದು, ಭಾಗಮಂಡಲ ಸೇರಿ ಹಲವು ಪ್ರದೇಶಗಳು ಜಲಾವೃತವಾಗಿದೆ. ಅಬ್ಬಿ ಜಲಪಾತ ಬೋರ್ಗರೆದು ಧುಮ್ಮಿಕ್ಕುವ ದೃಶ್ಯ ನಯನಮನೋಹರವಾಗಿದೆ.

ವೆಬ್ದುನಿಯಾವನ್ನು ಓದಿ