ಜನಸಮುದಾಯಕ್ಕೆ ಅರಸು ಆದರ್ಶ: ಪ್ರಕಾಶ್

ಸೋಮವಾರ, 31 ಡಿಸೆಂಬರ್ 2007 (18:37 IST)
NEWS ROOM
ಮಾಜಿಕ ಅಸಮಾನತೆಗಳನ್ನು ಹೊಡೆದೋಡಿಸಿ ಎಲ್ಲ ವರ್ಗ ಮತ್ತು ಜಾತಿಗಳಿಗೆ ನ್ಯಾಯ ದೊರಕಿಸಿಕೊಟ್ಟ ಮಾಜಿ ಮುಖ್ಯಮಂತ್ರಿ ದಿ| ದೇವರಾಜ ಅರಸುರವರು ಜನಸಮುದಾಯಕ್ಕೆ ಆದರ್ಶ ಎಂದು ಮಾಜಿ ಉಪ ಮುಖ್ಯಮಂತ್ರಿ ಎಂ.ಪಿ.ಪ್ರಕಾಶ್ ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ಮಡಿವಾಳ ಯುವ ವೇದಿಕೆ ನಗರದಲ್ಲಿ ಆಯೋಜಿಸಿದ್ದ ದಿ|ಅರಸು ಸ್ಮರಣೋತ್ಸವ ಹಾಗೂ ಮಡಿವಾಳ ಸಮಾಜದ ಜನಜಾಗೃತಿ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಮಡಿವಾಳ ಜನಾಂಗ ಎಲ್ಲ ರಂಗಗಳಲ್ಲೂ ಹಿಂದುಳಿದಿರುವ ಕುರಿತು ವಿಷಾದ ವ್ಯಕ್ತಪಡಿಸಿದ ಅವರು, ಮಡಿವಾಳ ಜನಾಂಗದ ಉದ್ದಾರಕ್ಕಾಗಿ ಒಳ ಮೀಸಲಾತಿ ಕಲ್ಪಿಸುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ಹಿಂದಿನ ಸರ್ಕಾರ ರಚಿಸಿದ್ದ ಸಚಿವ ಸಂಪುಟ ಉಪಸಮಿತಿ ಅಧ್ಯಕ್ಷನಾಗಿ ಪ್ರಾಮಾಣಿಕ ಕಾರ್ಯ ಮಾಡುತ್ತಿದ್ದ ತಾವು ಸರ್ಕಾರ ಪತನಗೊಂಡ ಹಿನ್ನೆಲೆಯಲ್ಲಿ ಕಾರ್ಯ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದರು.

ಆಚಾರ-ವಿಚಾರ-ನಡವಳಿಕೆಗಳಲ್ಲಿ ದೇವರಾಜ ಅರಸು, ನಿಜಲಿಂಗಪ್ಪ ಹಾಗೂ ರಾಮಕೃಷ್ಣ ಹೆಗಡೆ ಅವರು ರಾಜ್ಯದ ಮಾದರಿ ಮುಖ್ಯಮಂತ್ರಿಗಳಾಗಿದ್ದಾರೆ ಎಂದು ಅಭಿಪ್ರಾಯಪಟ್ಟ ಪ್ರಕಾಶ್ ಈ ಮೂವರದು ಪ್ರಭಾವಶಾಲಿ ವ್ಯಕ್ತಿತ್ವ ಎಂದು ಬಣ್ಣಿಸಿದರು.

ವೆಬ್ದುನಿಯಾವನ್ನು ಓದಿ