ಜನಾರ್ದನ ರೆಡ್ಡಿಗೆ ಜಾಮೀನಿನ ಮೇಲೆ ಬಿಡುಗಡೆ ಭಾಗ್ಯವಿಲ್ಲ

ಶುಕ್ರವಾರ, 6 ಡಿಸೆಂಬರ್ 2013 (14:51 IST)
PR
PR
ಎಎಂಸಿ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಜಾಮೀನು ನೀಡಲು ಸುಪ್ರೀಂ ಕೋರ್ಟ್ ಇಂದು ನಿರಾಕರಿಸಿದೆ. ರೆಡ್ಡಿಗೆ ಜಾಮೀನು ನೀಡಲು ಸಿಬಿಐ ಕೂಡ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಇದರಿಂದ ಅಕ್ರಮ ಗಣಿಗಾರಿಕೆಗೆ ಆರೋಪದ ಮೇಲೆ ಜೈಲು ಸೇರಿರುವ ಜನಾರ್ಧನ ರೆಡ್ಡಿ ಅವರಿಗೆ ಜಾಮೀನಿನ ಮೇಲೆ ಕೂಡ ಬಿಡುಗಡೆ ಭಾಗ್ಯ ಸಿಕ್ಕಿಲ್ಲ. ಸುಪ್ರೀಂಕೋರ್ಟ್ ಸಿಬಿಐ ಕೋರ್ಟ್‌ಗೆ 6 ತಿಂಗಳಲ್ಲಿ ವಿಚಾರಣೆ ಪೂರ್ಣಗೊಳಿಸುವಂತೆ ಸೂಚಿಸಿದೆ. ಎಎಂಸಿ ಅಕ್ರಮ ಗಣಿಗಾರಿಕೆ ಸಂಬಂಧಿಸಿದಂತೆ 2012ರಂದು ರೆಡ್ಡಿಯನ್ನು ಬಂಧಿಸಲಾಗಿತ್ತು.

ವಿಚಾರಣೆ ಮುಗಿಯುವವರೆಗೆ ಜಾಮೀನು ನೀಡುವುದಿಲ್ಲ ಎಂದು ಕೋರ್ಟ್ ತಿಳಿಸಿದೆ. ರೆಡ್ಡಿ ಜಾಮೀನಿನ ಮೇಲೆ ಬಿಡುಗಡೆಯಾಗಿ ಹೊರಗೆ ಬಂದರೆ ವಿಚಾರಣೆ ಮೇಲೆ ಒತ್ತಡವನ್ನು ಹೇರಬಹುದು ಎಂಬ ಆತಂಕವನ್ನು ಸಿಬಿಐ ವಕೀಲರು ಗಮನಕ್ಕೆ ತಂದಿದ್ದರು.

ವೆಬ್ದುನಿಯಾವನ್ನು ಓದಿ